ಬೆಳ್ತಂಗಡಿ, ಸೆ 05 : ತಾಲೂಕು ಕಣಿಯೂರು ಗ್ರಾಮದ ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಸೆ. 04 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪದ್ಮುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಹಾಗೂ ಹಲವು ಸಾಮಾಜ ಸೇವಕರು ಮತ್ತು ಸಂಘಟನೆಗಳ ವತಿಯಿಂದ ಅನ್ನದಾನ, ಸಿಹಿ ತಿಂಡಿ ವಿತರಣೆ ನಡೆಯಿತು.
ಪದ್ಮುಂಜ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಪಾಲನಾ ಕೇಂದ್ರದಲ್ಲಿ ಶ್ರೀ ಪ್ರೇಮನಾಥ ಶೆಟ್ಟಿ ಮಲೆಂಗಲ್ಲು ಇವರು ಬೆಳಗ್ಗಿನ ತಿಂಡಿ ವ್ಯವಸ್ಥೆ, ಪದ್ಮುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಮಧ್ಯಾಹ್ನದ ಅನ್ನದಾನ ಹಾಗೂ ರಂಜಿತ್ ಪದ್ಮುಂಜ, ಮಹೇಶ್ ಪದ್ಮುಂಜ ಇವರುಗಳಿಂದ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ, ಮತ್ತು ಪಾನಿಯ ವ್ಯವಸ್ಥೆ, ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಸುನಿತಾ ಇವರು ಮೊಟ್ಟೆ ವಿತರಿಸಿದರು. ಈ ಸಂದರ್ಭದಲ್ಲಿ ದಾನಿಗಳು, ಪಾಲನ ಕೇಂದ್ರದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.




