ಉಪ್ಪಿನಂಗಡಿ, ಜು. 16 : ಖೋಟಾನೋಟು ತಯಾರಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ತಡರಾತ್ರಿ ವೇಳೆ ಅಡೆಂಜ ಎಂಬಲ್ಲಿ ದಾಳಿ ಮಾಡಿರುವ ಕುರಿತು ಮಾಹಿತಿ ದೊರೆತಿದೆ.
ಕಣಿಯೂರು ಗ್ರಾಮ ಪದ್ಮುಂಜದ ಅಡೆಂಜದಲ್ಲಿ ಖೋಟಾನೋಟು ತಯಾರಿಸುತ್ತಿದ್ದಾರೆಂಬ ಮಾಹಿತಿ ದೊರೆತ ಹಿನ್ನಲೆಯಲ್ಲಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆನ್ನಲಾಗಿದೆ.
ಯಂತ್ರಗಳನ್ನು ಬಳಸಿ ಖೋಟಾನೋಟು ತಯಾರಿಸುತ್ತಿದ್ದರು ಎಂಬ ಸುದ್ದಿಯೂ ಹರಡುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


