ಪದ್ಮುಂಜ, ಆ. 26 : ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ 50ನೇ ವರ್ಷದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಅಧ್ಯಕ್ಷತೆಯಲ್ಲಿ ಇಂದು ಸಂಘದ ರೈತ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿದೆ. ನಮ್ಮ ಸಂಘವು ಕಳೆದ 50 ವರ್ಷಗಳಿಂದ ಕಾರ್ಯಾಚರಿಸುತ್ತಾ, ಇತರ ಬ್ಯಾಂಕುಗಳೊಂದಿಗೆ ಇಂದಿನ ಸ್ಪರ್ಧಾತ್ಮಕ ಪೈಪೋಟಿಯನ್ನು ಮಾಡುತ್ತಾ ಉತ್ತಮ ಪ್ರಗತಿಯನ್ನು ಹೊಂದಿರುವುದು ಹೆಮ್ಮೆಯ ವಿಚಾರ. ಮೊಗ್ರು ಗ್ರಾಮದ ಮುರದಲ್ಲಿ ಸಂಘದ ಶಾಖೆ ತೆರೆಯುವ ಚಿಂತನೆ ಹಾಗೂ ಸುವರ್ಣ ಮಹೋತ್ಸವ ಅಂಗವಾಗಿ ಕಟ್ಟಡ ರಚನೆಗೊಳಿಸುವ ಉದ್ದೇಶವಿದೆ ಎಂದು ಹೇಳಿದರು.

ವಾರ್ಷಿಕ ವಾಹಿವಾಟು
ವರ್ಷಾಂತ್ಯದಲ್ಲಿ ಸಂಘವು ರೂ. 5.80 ಕೋಟಿ ಪಾಲು ಬಂಡವಾಳ, ರೂ 46.58 ಕೋಟಿ ಠೇವಣಿ ಹೊಂದಿರುತ್ತದೆ. ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ರೂ. 84.09 ಕೋಟಿ ಹೊರ ಬಾಕಿ ಸಾಲವಿದ್ದು, ವಾರ್ಷಿಕ ರೂ 485.02 ಕೋಟಿ ವ್ಯವಹಾರ ಮಾಡಿ, ವರದಿ ವರ್ಷ ರೂ 2.39 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ 12% ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಅವರು ಮಾಹಿತಿ ನೀಡಿದರು. ಅಲ್ಲದೇ ಸತತ 34 ವರ್ಷಗಳಿಂದ ಲಾಭ ಪಡೆಯುತ್ತಿದ್ದು ಲೆಕ್ಕಪರಿಶೋಧನೆಯಲ್ಲಿ “ಎ” ಗ್ರೇಡ್ ಪಡೆದಿದೆ. ಈ ಸಾಧನೆಗೆ ಉಪಾಧ್ಯಕ್ಷರ ಹಾಗೂ ನಿರ್ದೇಶಕರುಗಳ ಮಾರ್ಗದರ್ಶನ, ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಾಕಾರಗೊಂಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ
ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಅಶೋಕ್ ಪಿ., ನಿರ್ದೇಶಕರಾದ ನಾರಾಯಣ ಗೌಡ, ಉದಯ ಬಿ.ಕೆ., ಶೀಲಾವತಿ, ಡೀಕಯ್ಯ ಗೌಡ, ದಿನೇಶ್ ನಾಕ್, ಶಾರದಾ ಆರ್. ರೖ.ಪ್ರಭಾಕರ ಗೌಡ, ಪ್ರಸಾದ್ ಎ., ಚಂದನ್ ಕುಮಾರ್ ಎ, ಮತ್ತು ಬ್ಯಾಂಕ್ ಪ್ರತಿನಿಧಿ ಸುದರ್ಶನ್ ಉಪಸ್ಥಿತರಿದ್ದರು. ನಿರ್ದೇಶಕರಾದ ಶೀಲಾವತಿ ಮಹಾಸಭೆ ತಿಳುವಳಿಕೆ ಪತ್ರ ವಾಚಿಸಿ, ಸಿಬಂದಿ ಪ್ರೀತಮ್ ಸಾಲಿಯಾನ್ ವಾರ್ಷಿಕ ವರದಿ ವಾಚಿಸಿ, ಉದಯ ಭಟ್ ಕೆ. ಸ್ವಾಗತಿಸಿ , ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಬಿ. ನಿರೂಪಿಸಿದರು.
ಸಿಬ್ಬಂದಿಗಳಾದ , ವಿಠಲ ನೈಕ್ , ಜ್ಯೋತಿ, ಮಧುಶ್ರೀ, ಪ್ರೇಕ್ಷಿತ್ ಹೆಚ್ ಯು., ಸ್ಪಂದನ್ ಬಿ., ರಾಜವರ್ಮ ಇಂದ್ರ, ಗಣೇಶ್ ಹೆಚ್, ರಕ್ಷಿತ್ ಆರ್.ಎಸ್. ಹಾಗೂ ವೀರಪ್ಪ ಸಹಕರಿಸಿದರು.




