ಕಲ್ಮಂಜ : ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ನೂತನ ಶಿಲಾಮಯ ಧ್ವಜಸ್ಥಂಭ ಸಮರ್ಪಣೆ – ಉಜಿರೆಯಿಂದ ಭವ್ಯ ಮೆರವಣಿಗೆ

ಕಲ್ಮಂಜ : ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭಕ್ಕೆ ಭವ್ಯವಾದ ಚಾಲನೆ ದೊರೆಯಿತು. ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಮೊಕ್ತೇಶರರಾದ ಶ್ರೀ ಶರತ್ ಕೃಷ್ಣ ಪಡ್ವೇಟ್ನಾಯರು ಚಾಲನೆ ನೀಡಿದರು. ಭವ್ಯ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಧ್ವಜಸ್ಥಂಭವನ್ನು ತರಲಾಯಿತು.

Advertisement



ಧರ್ಮಸ್ಥಳದಲ್ಲಿ ವಿಶೇಷ ಪೂಜೆ :



ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ ಕ್ಷೇತ್ರದ ಅರ್ಚಕರು ವಿಷೇಶ ಪೂಜೆ ಸಲ್ಲಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವೀರೂ ಶೆಟ್ಟಿ ಧರ್ಮಸ್ಥಳ, ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್‌ ರಾವ್ ಧರ್ಮಸ್ಥಳ, ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ನಾಗೇಶ್ ಗೌಡ, ಸೀತಾರಾಮ್ ತೋಲ್ಪಡೀತಾಯ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನೀಲ್ ಕನ್ಯಾಡಿ, ತುಕಾರಾಮ್ ಸಾಲಿಯಾನ್, ರವಿ ಭಟ್ ಕಲ್ಮಂಜ, ಶಶಿಧರ್ ಕಲ್ಮಂಜ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು. ಉಜಿರೆಯಿಂದ ವಿವಿಧ ಭಜನಾ ತಂಡಗಳ ಮೂಲಕ ಮೆರವಣಿಗೆ ಸಾಗಿತು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.