ಪಾಕಿಸ್ತಾನದ ಆಸ್ಪತ್ರೆಯಲ್ಲಿ ಸಿರಿಂಜ್ ಮರುಬಳಕೆ – 331 ಮಕ್ಕಳಿಗೆ ಹೆಚ್‌ಐವಿ ಸೋಂಕು

ಇಸ್ಲಾಮಾಬಾದ್, ಏ. 15 : ಪಾಕಿಸ್ತಾನದ ಆಸ್ಪತ್ರೆಯೊಂದರಲ್ಲಿ ಸಿರಿಂಜ್ ಮರುಬಳಕೆ ಮಾಡಿದ ಪರಿಣಾಮ 331 ಮಕ್ಕಳಿಗೆ ಹೆಚ್‌ಐವಿ ಸೋಂಕು ತಗುಲಿರುವ ಆಘಾತಕಾರಿ ಘಟನೆ ತನಿಖೆಯಿಂದ ಬೆಳಕಿಗೆ ಬಂದಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಅಸುರಕ್ಷಿತ ಇಂಜೆಕ್ಷನ್ ಪದ್ಧತಿಗಳು ಮುಂದುವರೆದಿವೆ. ಮಕ್ಕಳಲ್ಲಿ ಹೆಚ್‌ಐವಿ ಪ್ರಕರಣಗಳು ಹೆಚ್ಚಾದ ನಂತರ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಹಸ್ಯ ದೃಶ್ಯಾವಳಿಗಳು ಮತ್ತು ಅಧಿಕೃತ ದತ್ತಾಂಶವನ್ನು ಆಧರಿಸಿದ ಸಂಶೋಧನೆಗಳು, THQ ಟೌನ್ಸಾ ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣದಲ್ಲಿನ ವ್ಯವಸ್ಥಿತ ವೈಫಲ್ಯಗಳನ್ನು ಸೂಚಿಸುತ್ತವೆ. ಅಲ್ಲಿ ಮರುಬಳಕೆ ಮಾಡಲಾದ ಸಿರಿಂಜ್‌ಗಳು ಮತ್ತು ಕಲುಷಿತ ಬಾಟಲುಗಳು ನೂರಾರು ಮಕ್ಕಳನ್ನು ಸೋಂಕಿಗೆ ದೂಡಿವೆ ಎಂದು ತಿಳಿದುಬಂದಿದೆ.

ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ಸೋರಿಕೆಯಾದ ಪೊಲೀಸ್ ದಾಖಲೆಗಳ ಡೇಟಾವನ್ನು ಬಳಸಿಕೊಂಡು ತನಿಖಾ ವರದಿ ಮಾಡಲಾಗಿದೆ. 2024ರ ನವೆಂಬರ್‌ನಿಂದ 2025 ರ ಅಕ್ಟೋಬರ್ ನಡುವೆ ಟೌನ್ಸಾದಲ್ಲಿ ಹೆಚ್‌ಐವಿ ಪಾಸಿಟಿವ್ ಪರೀಕ್ಷೆಯಲ್ಲಿ 331 ಮಕ್ಕಳಿಗೆ ಸೋಂಕು ತಗುಲಿದೆ.

2024 ರ ಕೊನೆಯಲ್ಲಿ ಸ್ಥಳೀಯ ವೈದ್ಯರೊಬ್ಬರು ಎಚ್‌ಐವಿ-ಪಾಸಿಟಿವ್ ಮಕ್ಕಳಲ್ಲಿ ಅಸಾಮಾನ್ಯ ಏರಿಕೆಯನ್ನು ಗುರುತಿಸಿದ್ದರು. ಪ್ರಕರಣ ಸಂಬAಧ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ಅಮಾನತುಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.