ಮಂಗಳೂರು : ಅತಿ ಹಿಂದುಳಿದ ಮಠಾಧೀಶರ ಮಹಾಸಭಾ(ರಿ.) ಧರ್ಮಸ್ಥಳ ಕ್ಷೇತ್ರದ ಪರವಾಗಿ ನಿಲ್ಲುವ ನಿರ್ಧಾರ – ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿ

ಮಂಗಳೂರು, ಜು. 9 : ಭಾರತದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಪರಮಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರನ್ನು ಉದ್ದೇಶಪೂರ್ವಕವಾಗಿ ಕಳಂಕ ತರಬೇಕೆಂದು ಯತ್ನಿಸಿ ಅದರ ಮೂಲಕ ಸನಾತನ ಧರ್ಮವನ್ನು ನಿಂದಿಸಿ ನಾಶಗೊಳಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ಷಡ್ಯಂತರದ ಭಾಗವಾಗಿ ನಿರಂತರವಾಗಿ ಮಾಡುತ್ತಾ ಬರಲಾಗಿದೆ. ಇದನ್ನೆಲ್ಲಾ ಗಮನಿಸಿ, ರಾಜ್ಯದ ಅತೀ ಹಿಂದುಳಿದ ಮಠಾಧೀಶರ ಮಹಾಸಭೆಯ ಎರಡು ದಿನದ ಚಿಂತನ ಶಿಬಿರ ದಿನಾಂಕ 27/28 ಜೂನ್ 2026 ರಂದು ಅತಿ ಹಿಂದುಳಿದ ಮಠಾಧೀಶರ ಬ್ಯೂಟದಿಂದ ಧರ್ಮಸ್ಥಳದ ಪರವಾಗಿ ಇರಬೇಕೆಂದು ಅದರ ಮೂಲಕ ಸನತಾನ ಧರ್ಮವನ್ನು ಉಳಿಸಬೇಕು ಎಂದು ನಿರ್ಣಯ ತೆಗೆದುಕೊಳ್ಳಲಾಯಿತು ಎಂದು ಮಹಾಸಭೆಯ ರಾಜ್ಯಾಧ್ಯಕ್ಷರಾದ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Advertisement

ಜುಲೈ 10ರಂದು ಶ್ರೀ ಧರ್ಮಸ್ಥಳ ಭೇಟಿ :

ಅತಿ ಹಿಂದುಳಿದ ಮಠಾಧೀಶರ ಬ್ಯೂಟದಿಂದ ಧರ್ಮಸ್ಥಳದ ಪರವಾಗಿ ಇರಬೇಕೆಂದು ನಿರ್ಧರಿಸಲಾದ ಬೆಂಬಲ ಪತ್ರವನ್ನು ನೀಡಲು ಮಹಾಸಭೆಯ ಕೋರ್ ಕಮಿಟಿಯಲ್ಲಿರುವ ಪ್ರಮುಖ ಸ್ವಾಮೀಜಿಗಳು ಜುಲೈ 10ರಂದು ಬೆಳಿಗ್ಗೆ 10.30 ನಿಮಿಷಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥನ ದರ್ಶನ ಪಡೆದು ಸನ್ಮಾನ್ಯ ಶ್ರೀ ವೀರೇಂದ್ರ ಹೆಗ್ಡೆ ಅವರನ್ನು ಭೇಟಿ ಮಾಡಿ ಬೆಂಬಲ ಪತ್ರವನ್ನು ನೀಡಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.