ಈದ್ ಮಿಲಾದ್ ಆಚರಣೆ ವೇಳೆ ಗಲಾಟೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಎಚ್ಚರಿಕೆ

Advertisement

ಬೆಂಗಳೂರು, ಆ. 27 : ಮುಸ್ಲಿಂ ಸಮುದಾಯದವರು ನಿನ್ನೆ (ಆಗಸ್ಟ್ 26) ಈದ್ ಮಿಲಾದ್ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಆದ್ರೆ, ಕೆಲವಡೆ ಕಿಡಿಗೇಡಿಗಳು ಕುಚೇಷ್ಟೆ ಮಾಡಿರುವುದು ವರದಿಯಾಗಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಸಂಘಟನೆ ಹಾಗೂ ಮುಸ್ಲಿಂ ಯುವಕ ನಡುವೆ ಗಲಾಟೆಯಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.

Advertisement

ಇನ್ನು ಈ ಪ್ರಕರಣದ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ನಾನು ಈ ಹಿಂದೆ ಸ್ಪಷ್ಟವಾಗಿ ಮನವಿ ಮಾಡಿದ್ದೆ. ಯಾರ ಆಚರಣೆಗೂ ಯಾರೂ ಅಡ್ಡಿ ಮಾಡಬಾರದು. ಮುಸ್ಲಿಂ, ಹಿಂದೂ ಅಥವಾ ಬೇರೆ ಯಾವುದೇ ಧರ್ಮದವರಿಗೂ ಕಾನೂನು ಕೈ ಗೆ ತೆಗೆದುಕೊಳ್ಳುವ ಹಕ್ಕಿಲ್ಲ. ಒಂದು ಕಾನೂನು ಅಂತ ಇದೆ ಅದನ್ನ ಪಾಲನೆ ಮಾಡಿದರೆ ಎಲ್ಲರಿಗೂ ಒಳ್ಳೆಯದು. ಸಂವಿಧಾನದಲ್ಲಿ ನಿಮ್ಮ ಹಾಗೂ ನಮ್ಮ ಆಚರಣೆಗೆ ಅವಕಾಶ ಇದೆ. ದಯವಿಟ್ಟು ಸೌಹಾರ್ದತೆಯನ್ನು ಕಾಯ್ದುಕೊಂಡು ಎಲ್ಲರೂ ನಡೆಯಬೇಕು. ಯಾರು ಈ ಸಮಾಜದಲ್ಲಿ ವಿಷ ಬೀಜವನ್ನು ಬಿತ್ತುತ್ತಾರೆ. ಅವರ ಮೇಲೆ ನಾವು ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Advertisement

ಬಿಜೆಪಿಯವರು ಏನಾದರೂ ಅನ್ಕೊಳ್ಳಿ ಅವರ ಕೆಲಸವೇ ಅದು. ಅಶೋಕ್ ಅವರೇ ಒಂದು ಇಂಟರ್ವ್ಯೂ ನಲ್ಲಿ ಹೇಳಿಲ್ವಾ, ನಾವು ಮುಸ್ಲಿಮರು ಅಂಥ ಹೇಳದಿದ್ದರೆ, ಪ್ರಚೋದನೆ ನೀಡದಿದ್ದರೆ ನಮಗೆ ರಾಜಕೀಯ ಭವಿಷ್ಯವೇ ಇಲ್ಲ ಅಂತ. ಇದು ನಾನಲ್ಲ ವಿರೋಧ ಪಕ್ಷದ ನಾಯಕರು ಹೇಳಿದ್ದು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ