ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಅಮೃತ ಸ್ಪರ್ಶ – ಮುಂದಿನ ತಿಂಗಳು ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ

ಸುಬ್ರಹ್ಮಣ್ಯ, ಜ. 09 : ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಅಮೃತ ನಿಲ್ದಾಣ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಮುಂದಿನ ತಿಂಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಅತಿ ಹೆಚ್ಚು ಪ್ರಯಾಣಿಕರು ಸಂದರ್ಶಿಸುವ ನಿಲ್ದಾಣಗಳಲ್ಲೊಂದಾದ ಸುಬ್ರಹ್ಮಣ್ಯ ರೋಡ್ ನಿಲ್ದಾಣ ಅಮೃತ ನಿಲ್ದಾಣ ಯೋಜನೆಗೆ ಆಯ್ಕೆಯಾಗಿ 23.73 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸಲಾಗಿತ್ತು, ಅದರಂತೆ ಕಾಮಗಾರಿಗಳು ಆರಂಭಗೊಂಡು ಇದೀಗ ಅಂತಿಮ ಹಂತದಲ್ಲಿವೆ.

Advertisement

ಅಮೃತ ನಿಲ್ದಾಣ ಯೋಜನೆಯಡಿ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಮೊದಲ ಹಂತದಲ್ಲಿ ಪ್ರಮುಖ 7 ಕಾಮಗಾರಿ ನಡೆಸಲು ಯೋಜನೆ ರೂಪಿಸಲಾಗಿತ್ತು. ರೈಲು ನಿಲ್ದಾಣದ ಕಟ್ಟಡ ವಿಸ್ತರಣೆ, ಒಂದನೇ ಪ್ಲಾಟ್ ಫಾರ್ಮ್ನಲ್ಲಿ 2845 ಸ್ಟೇರ್‌ಮೀಟರ್ ಶೆಲ್ವರ್‌ನಿರ್ಮಾಣ ಹಾಗೂ ಎರಡು ಮತ್ತು ಮೂರನೇ ಪ್ಲಾಟ್ ಫಾರ್ಮ್ನಲ್ಲಿ 3346 ಸ್ಟೈರ್ ಮೀಟರ್ ಶೆಲ್ವರ್‌ನಿರ್ಮಾಣ ಮತ್ತು ಪ್ಲಾಟ್ ಫಾರ್ಮ್ ಅಭಿವೃದ್ಧಿ ನಿಲ್ದಾಣದಲ್ಲಿ ಎರಡು ಲಿಫ್ಟ್ ಹಾಗೂ ಎರಡು ಎಸ್ಕಲೇಟರ್ ವ್ಯವಸ್ಥೆ, ಪಾದಚಾರಿ ಮೇಲೇತುವೆ ನಿರ್ಮಾಣ, ನಿಲ್ದಾಣದ ಒಳಾಂಗಣ, ಪೀಠೋಪಕರಣ ಅಭಿವೃದ್ಧಿ, ವಿಶ್ರಾಂತಿ ಕೊಠಡಿ, ಶೌಚಾಲಯ, ಪಾರ್ಕಿಂಗ್ ಪ್ರದೇಶ, ಬೆಳಕಿನ ವ್ಯವಸ್ಥೆ, ಪ್ರವೇಶ ದ್ವಾರದ ಅಭಿವೃದ್ಧಿ ಮತ್ತಿತರ, ವಿದ್ಯುದೀಕರಣ ಕೆಲಸ, ಎಲ್. ಇ.ಡಿ. ನಾಮಫಲಕ, ಕೋಚ್/ರೈಲು ಸೂಚನ ಫಲಕಗಳು, ಗಡಿಯಾರ (ಸಮಯ) ವ್ಯವಸ್ಥೆ ಮೊದಲಾದ ಕಾಮಗಾರಿಗಳು ಒಳಗೊಂಡಿತ್ತು.

ಪ್ಲಾಟ್ ಫಾರ್ಮ್ 1, 2, 3ರ ರೂಫ್ ಶೀಟಿಂಗ್, ಪ್ಲಾಟ್ ಫಾರ್ಮ್ 2ರ ವಿಡಿಸಿ ಫ್ಲೋರಿಂಗ್, ಸಾರ್ವಜನಿಕರ ಮತ್ತು ಸಿಬಂದಿ ವಾಹನ ಪಾರ್ಕಿಂಗ್ ಪ್ರದೇಶದ ಫೌಂಡೇಶನ್, ತಡೆಗೋಡೆ ಕಾಮಗಾರಿಯ ಫೌಂಡೇಶನ್, ನಿಲ್ದಾಣ ಕಟ್ಟಡದ ಎದುರಿನ ಪ್ಲಾಟ್ ಫಾರ್ಮ್ ಶೆಲ್ಟರ್ ಫೌಂಡೇಶನ್ ಪೂರ್ಣಗೊಂಡಿದೆ. ನಿಲ್ದಾಣದ ಕಟ್ಟಡ ಕಾಮಗಾರಿಯಲ್ಲಿ ಬ್ರಿಕ್ಸ್ ವರ್ಕ್, ಪ್ಲಾಸ್ಟರಿಂಗ್ ವರ್ಕ್, ಪುರುಷರ ಹಾಗೂ ಮಹಿಳೆಯರ ವಿಶ್ರಾಂತಿ ಕೊಠಡಿಯ ನವೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ಲಾಟ್ ಫಾರ್ಮ್ 1ರಲ್ಲಿ ಕೆಲವು ಅಭಿವೃದ್ಧಿ ಕಾಮಗಾರಿ ಹಾಗೂ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಪ್ಲಾಟ್ ಫಾರ್ಮ್ 2ರಲ್ಲಿ ಗ್ರಾನೈಟ್ ಅಳವಡಿಕೆ ಪ್ರಗತಿಯಲ್ಲಿದೆ. ಸಾರ್ವಜನಿಕರ ಹಾಗೂ ಸಿಬಂದಿ ವಾಹನ ಪಾರ್ಕಿಂಗ್ ಪ್ರದೇಶದ ಫ್ಯಾಬ್ರಿಕೇಶನ್ ಕೆಲಸ ನಡೆಯುತ್ತಿದೆ. ಪ್ರವೇಶ ದ್ವಾರದ ಬಳಿ ಹಾಗೂ ಎದುರು ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ವಿದ್ಯುದೀಕರಣ ಕೆಲಸ ನಡೆಯುತ್ತಿದೆ. ಪ್ಲಾಟ್ ಫಾರ್ಮ್ 1 ಮತ್ತು 2ರ ಲಿಫ್ಟ್ ಕೆಲಸ ಪ್ರಗತಿಯಲ್ಲಿದೆ.

ಈಗಾಗಲೇ ನಿಲ್ದಾಣದಲ್ಲಿ ಹಲವು ಕಾಮಗಾರಿಗಳು ಭರದಿಂದ ಸಾಗುತ್ತಿದೆ. ರೈಲ್ವೇ ಅಧಿಕಾರಿಗಳು ಕೂಡ ಆಗಾಗ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ತಿಂಗಳು ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಅಮೃತ ನಿಲ್ದಾಣ ಯೋಜನೆಯ ಕಾಮಗಾರಿಗಳ ಮೂಲಕ ಸುಬ್ರಹ್ಮಣ್ಯ ರೋಡ್ ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದು, ನಿಲ್ದಾಣಕ್ಕೆ ಹೊಸ ರೂಪ ಸಿಗಲಿದೆ ಹಾಗೂ ಪ್ರಯಾಣಿಕರಿಗೆ ಉತ್ತಮ ವ್ಯವಸ್ಥೆಗಳು ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಅನುದಾನ ಬಿಡುಗಡೆಗೊಂಡಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆಯಲಿದೆ ಎಂಬ ನಿರೀಕ್ಷೆಯೂ ರೈಲ್ವೇ ಬಳಕೆದಾರರಲ್ಲಿದೆ. ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳು ಈ ಭಾಗದ ಹಲವು ರೈಲ್ವೇ ಬೇಡಿಕೆಗಳಿಗೆ ಮುನ್ನುಡಿಯಾಗಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.