ಬೆಳ್ತಂಗಡಿ, ಆ. 12 : ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಸಂಸ್ಥಾಪಕರಾದ ದೀಪಕ್ ಜಿ. ಬೆಳ್ತಂಗಡಿ ಇವರ ನೇತೃತ್ವದಲ್ಲಿ 588ನೇ ಸೇವಾ ಯೋಜನೆಯಾದ 3ನೇ ವರ್ಷದ ಆಟಿದ ಕಷಾಯ ಮತ್ತು ಮೆತ್ತೆ ಗಂಜಿ ವಿತರಣಾ ಕಾರ್ಯಕ್ರಮ ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ನಡೆಯಿತು.

ಕಾರ್ಯಕ್ರಮವನ್ನು ರಾಜ ಕೇಸರಿ ಸೇವಾ ಟ್ರಸ್ಟ್ ರಿ ಇದರ ಜಿಲ್ಲಾಧ್ಯಕ್ಷರಾದ ಸಂತೋಷ್ ಕೊಲ್ಯ ಇವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ, ಕಷಾಯ ಕುಡಿದು ಮೆತ್ತೆ ಗಂಜಿ ಸವಿದರು. ಅಲ್ಲದೇ, ತಮ್ಮ ತಮ್ಮ ಮನೆಗಳಿಗೂ ಬಾಟಲ್ ಮೂಲಕ ಕೊಂಡು ಹೋದರು.
ಬೆಳ್ತಂಗಡಿ ತಹಶೀಲ್ದಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇನ್ನು, ಕಾರ್ಯಕ್ರಮದಲ್ಲಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ ಸುವರ್ಣ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ತುಕಾರಾಮ್ ಬಿ., ಪತ್ರಕರ್ತ ಮನೋಹರ್ ಬಳಂಜ, ರಾಜ ಕೇಸರಿ ಸೇವಾ ಟ್ರಸ್ಟ್ ರಿ. ಇದರ ಜಿಲ್ಲಾ ಸಂಚಾಲಕರು ಪ್ರಸಾದ್ ಕುಲಾಲ್, ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬಂಟ್ವಾಳ ತಾಲೂಕು ಅಧ್ಯಕ್ಷರಾದ ಗೌತಮ್ ಪೂಜಾರಿ, ರಾಜ ಕೇಸರಿ ಸೇವಾ ಟ್ರಸ್ಟ್ ರಿ ಬೆಳ್ತಂಗಡಿ ತಾಲೂಕು ಜೊತೆ ಕಾರ್ಯದರ್ಶಿ ವಿನೋದ್ ಲಾಯಿಲ, ಸಂದೀಪ್ ಬೆಳ್ತಂಗಡಿ, ಶರತ್ ಕೆಎಸ್, ಸಂದೇಶ್,
ಶರತ್ ಕರಾಯ. ಪ್ರವೀಣ್ ಆಚಾರ್ಯ. ಸಂತೋಷ್ ಲಾಯಿಲ್, ಪುನೀತ್ ಲಾಯಿಲಾ, ಪ್ರಶಾಂತ್ ಗುರುವಾಯನಕೆರೆ, ದೇವರಾಜ್ ಪೂಜಾರಿ, ಕಿಶನ್ ಚಂದ್ರ, ಜಯಂತ್, ಅಕ್ಷತ್, ವಸಂತ್, ಗಣೇಶ್, ಸತೀಶ್ ಕಂಗಿತ್ತಲ್, ನಿತೇಶ್, ಪ್ರಜ್ವಲ್ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.




