ಅತ್ಯಾಚಾರದಿಂದ ಗರ್ಭಧಾರಣೆಯಾಗಿದ್ದರೆ ಗರ್ಭಪಾತಕ್ಕೆ ಅವಕಾಶ ಕೊಡಿ – ಸುಪ್ರೀಂ ಕೋರ್ಟ್

ನವದೆಹಲಿ, ಮೇ, 01 : 30 ವಾರಗಳ ನಂತರವೂ 15 ವರ್ಷದ ಬಾಲಕಿಯೊಬ್ಬಳ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿರುವ ಆದೇಶವನ್ನು ಪ್ರಶ್ನಿಸಿ ದೆಹಲಿ ಏಮ್ಸ್ ಸಲ್ಲಿಸಿರುವ ಮೇಲ್ಮನವಿಗೆ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಅತ್ಯಾಚಾರದಿಂದ ಗರ್ಭಧಾರಣೆಯಾಗಿದ್ದರೆ 20 ವಾರಗಳ ನಂತರವೂ ಅಂಥ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅವಕಾಶ ಕಲ್ಪಿಸುವ ಕಾನೂನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಿದೆ.

ಅತ್ಯಾಚಾರದಿಂದಾಗಿ ಗರ್ಭಧಾರಣೆಯಾಗಿದ್ದರೆ ಅದನ್ನು ಅಂತ್ಯಗೊಳಿಸಲು ಯಾವುದೇ ಸಮಯದ ಮಿತಿ ಇರಬಾರದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ. ಜಾಯ್‌ಮಾಲ್ಯ ಬಾಗಿ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ. ಕಾನೂನು ಮೂಲಸ್ವರೂಪದಲ್ಲಿರಬೇಕು ಮತ್ತು ಸಮಯಕ್ಕೆ ಅನುಗುಣವಾಗಿರಬೇಕು ಎಂದೂ ಅಭಿಪ್ರಾಯಪಟ್ಟಿದೆ. ಒಂದೊಮ್ಮೆ ತಾಯಿಗೆ ಶಾಶ್ವತ ಅಂಗವೈಕ್ಯ ಆಗುವ ಸಾಧ್ಯತೆಗಳು ಇಲ್ಲದಿದ್ದರೆ ಗರ್ಭಪಾತ ನಡೆಸಬಹುದು ಎಂದು ತಿಳಿಸಿದೆ.

ಸಂತ್ರಸ್ತೆಯ ಪೋಷಕರ ಸಲಹೆ ಪಡೆದುಕೊಂಡು ಏಮ್ಸ್ ಮುಂದುವರಿಯಬೇಕು. ಸಂಬಂಧಪಟ್ಟವರ ಒಪ್ಪಿಗೆಯೊಂದಿಗೆ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ. ಏ.24ರಂದು ನ್ಯಾ.ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, 30 ವಾರಗಳ ನಂತರವೂ 15ರ ಬಾಲಕಿಯ ಗರ್ಭಪಾತಕ್ಕೆ ಅವಕಾಶ ನೀಡಿ, ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಇದೀಗ ಏಮ್ಸ್ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.