ಧರ್ಮಶಾಲಾದಲ್ಲಿ RCB ಕಮಾಲ್ – GT ಬೌಲಿಂಗ್ ಧೂಳೀಪಟ – ಆರ್ ಸಿಬಿ ಬ್ಯಾಟಿಂಗ್ ಅಬ್ಬರ !

Advertisement

ಧರ್ಮಶಾಲಾ, ಮೇ 27 : ಪಂದ್ಯ ಆರಂಭಕ್ಕೂ ಮುನ್ನ ಗುಜರಾತ್ ನ ಬಲಿಷ್ಠ ಬೌಲಿಂಗ್ ಪಡೆ ರಾಯಲ್ ಚಾಲೆಂಜರ್ಸ್ ತಂಡವನ್ನು ಕಟ್ಟಿಹಾಕಬಹುದು ಎಂಬುದು ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿತ್ತು. ಆದರೆ, ಪಂದ್ಯ ಆರಂಭವಾದ ಬಳಿಕ ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳು ಉಲ್ಟಾವಾಗಿ ರನ್ ಪ್ರವಾಹವವನ್ನೇ ಹರಿಸಿತು ರಾಯಲ್ಸ್ ಪಡೆ. ಮಾತ್ರವಲ್ಲದೆ ಎದುರಾಳಿ ಶುಭಮನ್ ಗಿಲ್ ಪಡೆ ವಿರುದ್ಧ 92 ರನ್ ಗಳ ಜಯಭೇರಿ ಬಾರಿಸುವ ಮೂಲಕ ನೇರವಾಗಿ ಐಪಿಎಲ್ 2026 ಸೀಸನ್ ನ ಫೈನಲ್ ಪ್ರವೇಶಿಸಿತು.

Advertisement

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತು. ಇದಕ್ಕುತ್ತರವಾಗಿ ಗುಜರಾತ್ ಜೈಂಟ್ಸ್ ತಂಡ 19.3 ಓವರ್ ಗಳಲ್ಲಿ 162 ರನ್ ಗಳಿಗೆ ಸರ್ವಪತನ ಕಂಡಿತು.

Advertisement

ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡದಿದ್ದರಿಂದ ಗುಜರಾತ್ ತಂಡ ದೊಡ್ಡ ಸೋಲು ಕಾಣುವಂತಾಯಿತು. 43 ಎಸೆತಗಳನ್ನು ಎದುರಿಸಿದ ರಾಹುಲ್ ತೆವಾಟಿಯಾ 8 ಬೌಂಡರಿ ಮತ್ತು ಸಿಕ್ಸರ್ ಗಳನ್ನು ಒಳಗೊಂಡ 68 ರನ್ ಗಳಿಸಿ ಭುವನೇಶ್ವರ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು. ಜಾಸ್ ಬಟ್ಲರ್ ಅವರು 11 ಎಸೆತದಿಂದ 29 ರನ್ ಮತ್ತು ಸಾಯಿ ಸುದರ್ಶನ್ 9 ಎಸೆತದಲ್ಲಿ 14 ರನ್ ಗಳಿಸಿದರು. ಬೇರಾವ ಬ್ಯಾಟರ್ ಸಹ ಎರಡಂಕಿಯನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಜೇಕಬ್ ಡಫಿ 3 ವಿಕೆಟ್ , ಭುವನೇಶ್ವರ್ ಕುಮಾರ್, ರಸಿಕ್ ಸಲಾಂ, ಕೃನಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಸೀಸನ್ ನಲ್ಲಿ ವಿಕೆಟ್ ಗಳಿಕೆಯ ಸಂಖ್ಯೆಯನ್ನು 26ಕ್ಕೇರಿಸಿಕೊಂಡ ಭುವನೇಶ್ವರ್ ಕುಮಾರ್ ಅವರು ಪರ್ಪಲ್ ಕ್ಯಾಪ್ ಪಡೆದುಕೊಂಡರು.

ರಜತ್ ಬ್ಯಾಟಿಂಗ್ ವೈಭವ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಆರಂಭದಿಂದಲೇ ವೇಗದ ರನ್ ಗೆ ಕೈ ಹಾಕಿತು. ಗಾಯಾಳು ಫಿಲ್ ಸಾಲ್ಟ್ ಅವರ ಬದಲಿಗೆ ಆರಂಭಿಕನಾಗಿ ಆಡುತ್ತಿರುವ ವೆಂಕಟೇಶ್ ಅಯ್ಯರ್ (7 ಎಸೆತದಲ್ಲಿ19 ರನ್) ಅವರು ಆರಂಭದ ಓವರ್ ನಲ್ಲೇ 3 ಬೌಂಡರಿ ಬಾರಿಸಿ ಎದುರಾಳಿ ಬೌಲರ್ ಗಳಲ್ಲಿ ನಡುಕ ಹುಟ್ಟಿಸಿದರು. 2 ಓವರ್ ಮುಗಿಯುವುದರೊಳಗಾಗಿ ಅವರ ವಿಕೆಟ್ ಪತನವಾದರೂ ಆರ್ ಸಿಬಿ ರನ್ ರೇಸ್ ಗೆ ಗುಜರಾತ್ ಬೌಲರ್ ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(25 ಎಸೆತದಲ್ಲಿ 43 ರನ್) ಈ ಸೀಸನ್ ನಲ್ಲಿ 600 ರನ್ ಗಳ ಗಡಿ ದಾಟಿದರು. ದೇವದತ್ ಪಡಿಕ್ಕಲ್ ಅವರು 19 ಎಸೆತಗಳಿಂದ ಉಪಯುಕ್ತ 30 ರನ್ ಗಳ ಕೊಡುಗೆ ನೀಡಿದರು.

ಪವರ್ ಪ್ಲೇ ಮುಗಿವುದರೊಳಗೆ 76 ರನ್ ಹರಿದು ಬಂದರೆ 10.1 ಓವರ್ ಗಳಲ್ಲಿ ನೂರರ ಗಡಿ ದಾಟಿತು. ಈ ಹಂತದಲ್ಲಿ ಆರ್ ಸಿಬಿ ಇನ್ನಿಂಗ್ಸ್ ಗೆ ಮತ್ತಷ್ಟು ವೇಗ ಕೊಟ್ಟವರು ನಾಯಕ ರಜತ್ ಪಾಟೀದಾರ್. ಕೇವಲ 33 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್ ಗಳನ್ನು ಸಿಡಿಸಿದ ಅವರು 93 ರನ್ ಗಳಿಸಿ ಅಜೇಯರಾಗುಳಿದರು. ಕೃನಾಲ್ ಪಾಂಡ್ಯ (28 ಎಸೆತದಲ್ಲಿ 43 ರನ್) ಮತ್ತು ಜಿತೇಶ್ ಶರ್ಮಾ(5 ಎಸೆತದಲ್ಲಿ ನಾಟೌಟ್ 15 ರನ್) ಅವರಿಗೆ ಸಾಥ್ ನೀಡಿದರು. ಆರ್ ಸಿಬಿ ಮಂಗಳವಾರ ಗಳಿಸಿದ 254 ರನ್ ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಅತಿ ದೊಡ್ಡ ಮೊತ್ತವಾಗಿದೆ. ನಾಯಕನಾಟ ಆಡಿದ ರಜತ್ ಪಾಟಿದಾರ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ ಗಳಲ್ಲಿ 254/5, ರಜತ್ ಪಾಟಿದಾರ್ ಅಜೇಯ 93(33), ವಿರಾಟ್ ಕೊಹ್ಲಿ 43(25), ದೇವದತ್ ಪಡಿಕ್ಕಲ್ 43(28), ಕೃನಾಲ್ ಪಾಂಡ್ಯ 43(28), ಕಗಿಸೋ ರಬಾಡಾ 54ಕ್ಕೆ 2, ಜೇಸನ್ ಹೋಲ್ಡರ್ 39ಕ್ಕೆ 2, ಪ್ರಸಿದ್ಧ ಕೃಷ್ಣ 53ಕ್ಕೆ 1.

ಗುಜರಾತ್ ಟೈಟಾನ್ಸ್ 19.3 ಓವರ್ ಗಳಲ್ಲಿ 162, ರಾಹುಲ್ ತೆವಾಟಿಯಾ 68(43), ಜೋಸ್ ಬಟ್ಲರ್ 29(11), ಸಾಯಿ ಸುದರ್ಶನ್ 14(9), ಜೇಕಬ್ ಡಫಿ 39ಕ್ಕೆ 3, ಭುವನೇಶ್ವರ್ ಕುಮಾರ್ 28ಕ್ಕೆ 2, ಜೋಶ್ ಹೇಜಲ್ ವುಡ್ 39ಕ್ಕೆ 1, ರಸಿತ್ ಸಲಾಂ 24ಕ್ಕೆ 2, ಕೃನಾಲ್ ಪಾಂಡ್ಯ 16ಕ್ಕೆ 2.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ