ಮುಂಡಾಜೆ : ಎಂಡೋಪೀಡಿತ ಬಾಲೆಗೆ ನೆರವು ಹಸ್ತಾಂತರಿಸಿ ರಿಯಾನ್ಷ್ ಮುಂಡಾಜೆ ಹುಟ್ಟುಹಬ್ಬ ಆಚರಣೆ – ಸಮಾಜಕ್ಕೆ ಮಾದರಿ

ಮುಂಡಾಜೆ, ಮೇ 19 : ಎಂಡೋ ಪೀಡಿತರಾಗಿ ಹುಟ್ಟಿನಿಂದಲೇ ಬದುಕಿನ ಸಂಕಷ್ಟ ಎದುರಿಸುತ್ತಿರುವ ತೆಂಕಕಾರಂದೂರು ಗ್ರಾಮದ ಪೆರೋಡಿತ್ತಾಯಕಟ್ಟೆ ನಿವಾಸಿ 9ರ ಬಾಲೆಗೆ ದಿನಸಿ ಸಾಮಾಗ್ರಿ ಮತ್ತು ಆರ್ಥಿಕ ನೆರವು ಹಸ್ತಾಂತರಿಸುವ ಮೂಲಕ ಮುಂಡಾಜೆಯ ಪುಟ್ಟ ಬಾಲಕ ರಿಯಾನ್ಷ್ ತನ್ನ 7 ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ.

Advertisement

ಮುಂಡಾಜೆಯ “ಖುಷಿ ಸ್ಟುಡಿಯೋ” ಮತ್ತು “ಈಶ ಮಲ್ಟಿ ಬ್ರ್ಯಾಂಡ್ ಕಾರ್ ಕೇರ್ ಸೆಂಟರ್” ಇದರ ಮಾಲಿಕರಾಗಿರುವ ರಾಕೇಶ್ ನಾಯ್ಕ್ ಅವರ ಪುತ್ರ ರಿಯಾನ್ಷ್ ಅವರ ಹುಟ್ಟುಹಬ್ಬವನ್ನು ಈ ರೀತಿ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಆಚರಿಸಿದ್ದಾರೆ.

ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಮೂಲಕ ಈ ಅರ್ಹ ಕುಟುಂಬವನ್ನು ಮೇ.18 ರಂದು ಅವರ ಬಾಡಿಗೆ ನಿವಾಸದಲ್ಲಿ ಭೇಟಿ ಮಾಡಿ ನೆರವು ಹಸ್ತಾಂತರಿಸಿದರು. ಕೂಲಿ ಕಾರ್ಮಿಕರಾಗಿರುವ ಪ್ರಶಾಂತ್ ಮತ್ತು ಗೃಹಿಣಿ ಲಾವಣ್ಯ ದಂಪತಿ ಪುತ್ರಿ ಮಾನ್ಯ ಎಂಡೋಸಲ್ಫಾನ್ ಪೀಡಿತೆಯಾಗಿದ್ದು ವಿಶೇಷ ಚೇತನೆಯಾಗಿದ್ದಾರೆ. ದಂಪತಿಯ ಹಿರಿ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಬಾಲೆ ವಿಮುಕ್ತಿ ಸಂಸ್ಥೆ ನಡೆಸುವ ” ದಯಾ” ವಿಶೇಷ ಶಾಲೆಯಲ್ಲಿ ಪ್ರತಿದಿನ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.