ಬಂಟ್ವಾಳ : ಸಜೀಪ ದಸರಾ – 100ನೇ ದಸರಾ ಮಹೋತ್ಸವಕ್ಕೆ 3ನೇ ಹಂತದ ಸಭೆ

Advertisement

ಬಂಟ್ವಾಳ, ಜು. 19 : ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಷ್ ನಗರ ಬೇಂಕ್ಯದಲ್ಲಿ ನಡೆಯಲಿರುವ 100ನೇ ವರ್ಷದ ಶಾರದಾ ಪೂಜಾ ಮಹೋತ್ಸವಕ್ಕೆ ಈಗಾಗಲೇ 2ಹಂತಗಳಲ್ಲಿ ಸಭೆ ನಡೆದಿದ್ದು ಇಂದು ಅಧ್ಯಕ್ಷರು ಹಾಗೂ ಸದಸ್ಯರ ಸಮ್ಮುಖದಲ್ಲಿ 3ನೇ ಹಂತದ ಸಭೆ ನಡೆಯಿತು.

Advertisement

99 ವರ್ಷಗಳ‌ ಶಾರದಾ ಪೂಜಾ ಮಹೋತ್ಸವನ್ನು ಮುಗಿಸಿ ಸಜೀಪ ದಸರಾ ಎಂಬ ಹೊಸ ಹೆಸರಿನ‌‌ ನಾಮಕರಣದೊಂದಿಗೆ ಈ ಬಾರಿ 100ನೇ ವರ್ಷಾಚರಣೆಗೆ ಕಾಲಿಟ್ಟಿದ್ದು ಅದ್ಧೂರಿಯಾಗಿ ನಡೆಯಲಿದೆ.

ಇಂದು 3ನೇ ಹಂತದ ಸಭೆ ನಡೆದಿದ್ದು, ಸಭೆಯಲ್ಲಿ ಮಾತನಾಡಿದ ಶಾರದಾ ಪೂಜಾ ಮಹೋತ್ಸವದ ಅಧ್ಯಕ್ಷರಾದ ಶ್ರೀದೇವಿಪ್ರಸಾದ್ ಪೂಂಜಾ ಅವರು, ಅ.17ರಿಂದ ಅ.22ರವರೆಗೆ ಒಟ್ಟು 6 ದಿನ ನಡೆಸಲು ನಿರ್ಧರಿಸಲಾಗಿದೆ. 100ನೇ ವರ್ಷದ ಈ ಸಜೀಪ ದಸರಾ ಜೆಲ್ಲೆಯಲ್ಲೇ ಪ್ರಸಿದ್ಧಿ ಪಡೆಯಬೇಕು ಹಾಗೂ ನಮ್ಮ ಈ ದಸರಾ ದಿಂದ ಎಷ್ಟು ಜನರಿಗೆ ಸಹಕಾರಿಯಾಗಬೇಕು ಮತ್ತು 6ದಿನದ ಕಾರ್ಯಕ್ರಮ ನಮಗೆ ದೊಡ್ಡ ಮಟ್ಟದ ಜವಾಬ್ದಾರಿಯಾಗಿದೆ ಎಲ್ಲರೂ ರಾತ್ರಿ ಹಗಲೆನ್ನದೆ ಶ್ರಮವಹಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗೋಣ ಎಂದರು.

Advertisement

ಇನ್ನು ಸಭೆಯಲ್ಲಿ ಮೊದಲ 4 ದಿನ ದೇವಿಗೆ ವಿಶೇಷ ಪೂಜೆ ನಡೆಸುವ ವಿಚಾರವಾಗಿ ಸದಸ್ಯರಿಂದ ಹಾಗೂ ಮಾಗಣೆ ತಂತ್ರಿಗಳಿಂದ ಸಲಹೆಗಳನ್ನು ಪಡೆಯಲಾಯಿತು. 6ದಿನ ಏನೆಲ್ಲ ಕಾರ್ಯಕ್ರಮಗಳನ್ನ ಆಯೋಜಿಸಬೇಕೆಂದು ಹಾಗೂ ಅಥಿತಿಗಳ ಉಪಸ್ಥಿತಿಗಳ ವಿಚಾರವಾಗಿ ಚರ್ಚೆಯನ್ನು ನಡೆಸಲಾಯಿತು. ಒಟ್ಟು 60 ಲಕ್ಷದವರೆಗೆ ಅಂದಾಜು ಖರ್ಚಾಗಳಿಗಿದ್ದು, ಇದರ ವಿಚಾರವಾಗಿಯೂ ಸಲಹೆಗಳನ್ನು ಪಡೆಯಲಾಯಿತು.

ಇನ್ನು ಸಭೆಯಲ್ಲಿ, ಸುಭಾಷ್ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ, ಶ್ರಿವಪ್ರಸಾದ್ ಶೆಟ್ಟಿ,  ಪುಷ್ಪರಮೇಶ್, ಶ್ರೀನಾಥ್ ಶೆಟ್ಟಿ, ಗಿರೀಶ್ ಕುಮಾರ್ ಪೆರ್ವ, ಶತಮಾನೋತ್ಸವ ಸಮಿತಿ ದುಬೈಯ್ ಸಂಚಾಲಕರಾದ ರೋನಾಲ್ಡ್ ಮಾರ್ಟಿಸ್, ಪ್ರಹ್ಲಾದ್ ಬೇಂಕ್ಯ, ಮಹಿಳಾ ಮಂಡಲ ಮತ್ತು ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ