ಬಂಟ್ವಾಳ, ಆ. 19 : ಸುಭಾಷ್ ಯುವಕ ಮಂಡಲ ರಿ.ಸಜೀಪಮೂಡ ಶ್ರೀ ಶಾರದಾ ಪೂಜಾ ಸಮಿತಿ ಶತಮಾನೋತ್ಸವ ಸಮಿತಿ ಸುಭಾಷ್ ನಗರ ಸಜೀಪಮೂಡ ಆಶ್ರಯದಲ್ಲಿ ನಡೆಯುವ ಸಜೀಪ ದಸರಾ-2026 ಶತಮಾನೋತ್ಸವದ ಸವಿನೆನಪಿಗಾಗಿ ಸಜೀಪಮೂಡ ಬೇಂಕ್ಯ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಶಿಥಿಲಾವಸ್ಥೆಯಲ್ಲಿದ್ದ ಎರಡು ಕೊಠಡಿಗಳನ್ನು ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷರಾದ ಶ್ರೀ ದೇವಿಪ್ರಸಾದ್ ಪೂಂಜ ,ಸುಭಾಷ್ ಯುವಕ ಮಂಡಲದ ಅಧ್ಯಕ್ಷರಾದ ಶ್ರೀಕಾಂತ್ ಶೆಟ್ಟಿ ಸಂಕೇಶ ಹಾಗೂ ಸಂಘದ ಸದಸ್ಯರು ಇದನ್ನು ಮರುನಿರ್ಮಾಣ ಮಾಡುವ ಯೋಚನೆ ಮಾಡಿದಂತೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕ್ ಶೆಟ್ಟಿ ನಗ್ರಿಗುತ್ತು ಇವರ ಮುತುವರ್ಜಿಯಲ್ಲಿ ಹಾಗೂ ಮುಂಬಯಿಯ ಎರಡು ಪ್ರತಿಷ್ಟಿತ ಸಂಸ್ಥೆಯ ವತಿಯಿಂದ ನೂತನ ಎರಡು ಕೊಠಡಿಗಳ ಮರುನಿರ್ಮಾಣಕ್ಕೆ ಇಂದು ಶಿಲಾನ್ಯಾಸವನ್ನ ನೆರವೇರಿಸಲಾಯಿತು.

ಸುಮಾರು 36ಲಕ್ಷ ವೆಚ್ಚದಲ್ಲಿ ನೂತನ ಎರಶು ಕೊಠಡಿ ನಿರ್ಮಾಣವಾಗಲಿದ್ದು ಅಕ್ಟೋಬರ್ ತಿಂಗಳಲ್ಲಿ ಶತಮಾನೋತ್ಸವ ದಿನದಂದು ಇದರ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ.

ಇನ್ನು ಈ ಸಂದರ್ಭ ಶಿವಪ್ರಸಾದ್ ಶೆಟ್ಟಿ, ಗಿರೀಶ್ ಪೆರ್ವ, ಯೋಗಿಶ್ ಬೆಳ್ಚಡ ಕೂಡೂರು, ಅಶ್ವಿತ್ ಬೇಂಕ್ಯ , ಸುಜಿತ್ ಬೇಂಕ್ಯ, ಕಾರ್ತಿಕ್ ಶೆಟ್ಟಿ , ಅನ್ವಿತ್ ಶೆಟ್ಟಿ, ಸಂತೋಷ್ ಬೇಂಕ್ಯ, ಚೆನ್ನಪ್ಪಪೂಜಾರಿ, ದೀಕ್ಷಿತ್ ಒಳಗುಡ್ಡೆ ಉಪಸ್ಥಿತರಿದ್ದರು.




