ಬಂಟ್ವಾಳ, ಆ. 17 : ತಾಲೂಕಿನ ಸಜೀಪಮೂಡ ಗ್ರಾಮದ ಬೇಂಕ್ಯ ಶಾಲೆಯಲ್ಲಿ ಸಜೀಪ ದಸರಾ – 2026ರ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆದಿದ್ದು ಈ ಸಂದರ್ಭ ಸಜೀಪ ದಸರಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಶ್ರೀ ವಿವೇಕ್ ಶೆಟ್ಟಿ ನಗ್ರಿಗುತ್ತು ನಾಲ್ಕು ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಸಮ್ಮುಖದಲ್ಲು ಲಾಂಛನವನ್ನು ಬಿಡುಗಡೆಗೊಳಿಸಿದರು.
ಇನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ವಿವೇಕ್ ಶೆಟ್ಟಿ ನಗ್ರಿ ಗುತ್ತು ಮಾತನಾಡಿ, ಸಜೀಪ ಮಾಗಣೆ ಈಗ ಒಂದು ಒಗ್ಗಟ್ಟಿನ ಮಾಗಣೆಯಾಗಿದೆ.ಹಾಗೂ ಮಾದರಿ ಮಾಗಣೆಯಾಗಿದೆ ಚುನಾವಣೆ ಬಂದಾಗ ನಾವು ರಾಜಕೀಯವಾಗಿದ್ರೂ ಇಂತಹ ಧಾರ್ಮಿಕ ಕಾರ್ಯಕ್ರಮ ಮಾಡುವಾಗ ರಾಜಕೀಯ ಮರೆತು ಒಗ್ಗಟ್ಟಿನಿಂದ ಎಲ್ಲರೂ ಬರುತ್ತೇವೆ ಇದು ನಮ್ಮ ಸಜೀಪಕ್ಕೆ ಹಾಗೂ ನಮ್ಮ ಮಾಗಣೆಯ ಜನರಿಗಿರುವ ಒಂದು ಬಾಂಧವ್ಯ, ಹೀಗಾಗಿ ಈ ಸಜೀಪ ಶಾಲೆಯನ್ನೂ ಕೂಡ ನಾವು ಅಭಿವೃದ್ಧಿಪಡೆಸಬೇಕೆಂಬ ಯೋಚನೆಯನ್ನು ಮಾಡಿದ್ದೇನೆ, ಈಗಾಗಲೆ ಕೆಲಸವೂ ಪ್ರಾರಂಭವಾಗಿದೆ. ಶಾಲೆಗೆ ಒಂದು ಕಾಂಕ್ರೀಟ್ ರಸ್ತೆಯ ಯೋಚನೆ ಬಂದಾಗ ತಕ್ಷಣ ಬಂಟ್ವಾಳ ಶಾಸಕರಲ್ಲಿ ಮನವಿ ಮಾಡಿದಾಗ ಮರುದಿನವೇ ಶಾಸಕರು, ಸರಿ ರಸ್ತೆ ಮಾಡಿಸಿ ಎಂದು ಹೇಳಿದ್ದು ಇದು ನಮ್ಮ ಸಜೀಪಕ್ಕೆ ಹಾಗೂ ಈ ತಾಯಿ ಶಾರದೆಗೆ ಇರುವ ಕಾರ್ಣಿಕವಾಗಿದೆ.ಶಾಲೆಗೆ ನೂತನ ಕೊಠಡಿ ನಿರ್ಮಾಣವಾಗುತ್ತಿದೆ ದಾನಿಗಳ ಸಹಕಾರ ಕೇಳಿದ್ದೇನೆ ಒಂದು ವೇಳೆ ಅದೂ ಸಾಕಾಗದಿದ್ದರೆ ನನ್ನ ಕೈಯಿಂದಲೇ ಹಣ ಹಾಕಿ ಈ ಶಾಲೆಯನ್ನು ಅಭಿವೃದ್ಧಿ ಪಡೆಸಿತ್ತೇನೆ ಎಂದರು.




