ಬೆಳ್ತಂಗಡಿ : ಧನು ಪೂಜೆಗೆ ತೆರಳಿದ್ದ ಬಾಲಕನ ಸಾವು ಪ್ರಕರಣ – ಸಂಬಂಧಿಕನೇ ಕೊಲೆಗಾರ…!?

ಬೆಳ್ತಂಗಡಿ:, ಜ. 16 : ಬೆಳಗ್ಗೆ ಧನು ಪೂಜೆಗೆಂದು ದೇವಸ್ಥಾನಕ್ಕೆ ಹೊರಟಿದ್ದ ಬಾಲಕನೊಬ್ಬ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಇದೀಗ ಮಹತ್ವದ ಸುಳಿವು ಲಭ್ಯವಾಗಿದೆ. ಆರಂಭದಿಂದಲೇ ಇದೊಂದು ವ್ಯವಸ್ಥಿತ ಕೊಲೆ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಇದೇ ಹಾದಿಯಲ್ಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇದೀಗ ಸುಮಂತ್ ಸಾವು ಪ್ರಕರಣದಲ್ಲಿ ಮತ್ತೊಂದು ಮಹತ್ವದ ಮಾಹಿತಿ ಲಭಿಸಿದೆ.

Advertisement

9ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಸಾವು ಪ್ರಕರಣ ಸಂಬಂಧ ವದಂತಿಯೊಂದು ಹಬ್ಬಿದ್ದು, ಆತನನ್ನು ಬಾಲಕನ ಸಂಬಂಧಿಯೇ ಕೊಲೆಗೈದಿರುವ ಬಗ್ಗೆ ಶಂಕೆ ಬಲವಾಗುತ್ತಿದೆ. ಪೊಲೀಸರು ನಡೆಸಿರುವ ತನಿಖೆಯಲ್ಲಿ ಸಂಬಂಧಿಕನೇ ಕೊಲೆ ನಡೆಸಿರುವ ವದಂತಿ ಹಬ್ಬುತ್ತಿದೆ. ಈ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಬಹಿರಂಗಪಡಿಸಿಲ್ಲ. ಕೊಲೆಯೇ ಎಂಬ ಬಗ್ಗೆಯೂ ಕೂಡಾ ಪೊಲೀಸರು ಸ್ಪಷ್ಟನೆ ನೀಡಿಲ್ಲ. ಸದ್ಯ ಬಾಲಕನನ್ನು ಕೊಂದಿರುವುದು ಆತನ ಸಂಬಂಧಿಕನೇ ಎಂಬ ವದಂತಿ ಹಬ್ಬಿದ್ದು, ಈ ಬಗ್ಗೆ ಪೊಲೀಸರೇ ಸ್ಪಷ್ಟನೆ ನೀಡಬೇಕಿದೆ.

ಬಾಲಕನ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆ ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ, ಇದು ವ್ಯವಸ್ಥಿತ ಕೊಲೆಯೋ ಅಥವಾ ಆಕಸ್ಮಿಕ ಸಾವೋ ? ಎಂಬ ಬಗ್ಗೆ ಹಾಗೂ ಕೊಲೆಯೇ ಆಗಿದ್ದಲ್ಲಿ ಕೊಲೆಗೈದವರು ಯಾರು ? ಎಂಬುದು ಕೂಡಾ ಪೊಲೀಸ್ ತನಿಖೆಯಿಂದ ಬಹಿರಂಗವಾಗಬೇಕಿದೆ.

ಘಟನೆ ವಿವರ :

ಧನು ಮಾಸದ ವಿಶೇಷ ಪೂಜೆಯ ಹಿನ್ನೆಲೆಯಲ್ಲಿ ಸುಮಂತ್ ಪ್ರತಿ ದಿನ ನಾಳ ಶ್ರೀದುರ್ಗಾಪರಮೇಶ್ವರಿ ದೇವಾಲಯಕ್ಕೆ ಬೆಳಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದ. ಅದರಂತೆ ಧನು ಸಂಕ್ರಮಣದ ಕೊನೆಯ ದಿನವಾದ ಬುಧವಾರ ಬೆಳಗ್ಗೆ ಮನೆಯಿಂದ ಬೆಳಗ್ಗೆ 4.30 ಗಂಟೆಗೆ ದೇವಸ್ಥಾನಕ್ಕೆ ತೆರಳಿದ್ದ. ಆದರೆ ಆನಂತರ ಮನೆಗೆ ಹಿಂತಿರುಗದೇ ಇದ್ದಾಗ ಮನೆಯವರು ಹುಡುಕಾಡಿದ್ದು 500 ಮೀಟ‌ರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿತ್ತು.

ಆರಂಭದಲ್ಲಿ ಸುಮಂತ್‌ನನ್ನು ಚಿರತೆ ಒಯ್ದಿರುವ ಬಗ್ಗೆ ಸ್ಥಳಿಯರಲ್ಲಿ ಪ್ರಚಾರ ಹಬ್ಬಿದ್ದು, ಬೆಳ್ತಂಗಡಿ ಅಗ್ನಿಶಾಮಕದಳದ ಸಿಬ್ಬಂದಿಗಳು ಸಮೀಪದ ಕೆರೆಯಲ್ಲಿ ಹುಡುಕಾಡಿದಾಗ ಬಾಲಕನ ದೇಹ ಪತ್ತೆಯಾಗಿತ್ತು. ಬಾಲಕನ ದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಬಾವಿಗೆ ಬಿದ್ದ ಸಂದರ್ಭದಲ್ಲಿ ಆಗಿರುವ ಗಾಯಗಳೇ ಎಂಬ ಸಂಶಯ ಮೂಡಿತ್ತು. ಸ್ಥಳಕ್ಕೆ ಎಸ್ಪಿ ಅರುಣ್ ಭೇಟಿ ನೀಡಿ, ಪ್ರಕರಣದ ಕೂಲಂಕುಷ ತನಿಖೆಗೆ ನಾಲ್ಕು ತಂಡಗಳನ್ನು ರಚನೆ ಮಾಡಿ, ತನಿಖೆ ಕೈಗೆತ್ತಿಕೊಂಡಿದ್ದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಡಾಯಿಕಲ್ಲಿನಲ್ಲಿ ಕಾಲು ಉಳುಕಿ ಸಿಲುಕಿಕೊಂಡಿದ್ದ ಯುವಕ – ಅಗ್ನಿಶಾಮಕ ದಳ, ಪೊಲೀಸರ ಸಾಹಸಮಯ ಕಾರ್ಯಾಚರಣೆ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾರಿಂದ ಅರ್ಹ ಫಲಾನುಭವಿಗಳಿಗೆ 94 ಸಿ ಹಕ್ಕುಪತ್ರ  ವಿತರಣೆ – ಲಂಚ ನೀಡಿದ್ದರೆ ಹಣ ವಾಪಸ್ ಕೊಡುತ್ತೇನೆಂದ ಶಾಸಕರು !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಶಿಶಿಲ : ಸರ್ವೇ ನಂ.309ರ ಕೃಷಿ ಭೂಮಿ ಸಮಸ್ಯೆಯ ಕುರಿತು ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳೊಂದಿಗೆ ಚರ್ಚೆ – ಶಾಸಕ ಹರೀಶ್ ಪೂಂಜ

⚠️ Contents are protected on this website.