ಬೆಂಗಳೂರು : ಮುಗಿಯದ ಸಚಿವ ಸಂಪುಟ ಗೊಂದಲ – ಮತ್ತೆ ದಿಲ್ಲಿಗೆ ಡಿಕೆಶಿ ಪ್ರಯಾಣ ! ಸಂಪುಟಕ್ಕೆ ಸಣ್ಣ ಸರ್ಜರಿ ಸಾಧ್ಯತೆ ?

Advertisement

ಬೆಂಗಳೂರು, ಆ. 27 : ರಾಜ್ಯದಲ್ಲಿ ಮತ್ತೊಂದು “ಮಿನಿ’ ಸಂಪುಟ ವಿಸ್ತರಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಮುಂದಾಗಿದ್ದು, ಈ ಬಾರಿ ಓರ್ವ ಮಹಿಳೆಗೆ ಸಚಿವ ಸ್ಥಾನ ಒಲಿಯುವುದು ನಿಶ್ಚಿತ ಎನ್ನಲಾಗುತ್ತಿದೆ. ಇದೇ ವೇಳೆ ಸಣ್ಣ ಸರ್ಜರಿ ನಡೆದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

Advertisement

ಸರಕಾರಕ್ಕೆ ಸಣ್ಣ ಸರ್ಜರಿ ನಡೆಸುವ ವಿಚಾರವಾಗಿ ಸಿಎಂ ಡಿಕೆಶಿ ಅವರು ಗುರುವಾರ ದಿಲ್ಲಿಗೆ ತೆರಳುತ್ತಿದ್ದಾರೆ. ಅವರ ಬೆನ್ನಿಗೆ ಸಚಿವ ಸತೀಶ ಜಾರಕಿ ಹೊಳಿ ಕೂಡ ತೆರಳುವ ಸಾಧ್ಯತೆ ಇದೆ. ಈ ಸಂದರ್ಭ ಸಂಪುಟಕ್ಕೆ ಹೊಸ ಸೇರ್ಪಡೆ ಜತೆಗೆ ನಾಗೇಂದ್ರ ಅವರನ್ನು ಕೈಬಿಡುವಂತಹ ಹಲವು ಮಾರ್ಪಾಡು ಆಗುವ ನಿರೀಕ್ಷೆ ಇದೆ.

Advertisement

ಮಿನಿ ಸಂಪುಟ ವಿಸ್ತರಣೆ ಕುರಿತು ಸ್ವತಃ ಸಿಎಂ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದು, ಹೈಕಮಾಂಡ್ ಒಪ್ಪಿಗೆ ಪಡೆಯಲು ಅವರು ದಿಲ್ಲಿಗೆ ತೆರಳುತ್ತಿದ್ದಾರೆ. ಗುರುವಾರ ಬೆಳಗ್ಗೆ 7ರ ಸುಮಾರಿಗೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಹೊರಡುವ ಸಿಎಂ, ದಿಲ್ಲಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ 7.30ಕ್ಕೆ ದಿಲ್ಲಿಯಿಂದ ಬೆಂಗಳೂರಿಗೆ ಹೊರಡಲಿದ್ದಾರೆ.

“ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು ಕಾಂಗ್ರೆಸ್ ಸರಕಾರದ ಬದ್ಧತೆ ಮತ್ತು ಸಿದ್ಧಾಂತವಾಗಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಸಂಪುಟದಲ್ಲಿ ಮಹಿಳೆಗೆ ಸ್ಥಾನ ಸಿಗಲಿದೆ’ ಎಂದು ಸಿಎಂ ಖಚಿತಪಡಿಸಿದರು.


ಒಂದು ವೇಳೆ ಬಾಕಿ ಉಳಿದಿರುವ ಒಂದು ಸಚಿವ ಸ್ಥಾನವನ್ನು ಮಹಿಳೆಗೆ ನೀಡಿದರೆ, ಮಾಜಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡ ಹಾಗೂ ಅವರ ಸಮುದಾಯ ಪ್ರತಿನಿಧಿಸುವ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ಮರೀಚಿಕೆ ಆಗಲಿದೆ. ವಿಪಕ್ಷಗಳ ಒತ್ತಡಕ್ಕೆ ಮಣಿದು, ನಾಗೇಂದ್ರ ಅವರನ್ನು ಕೈಬಿಟ್ಟರೆ, ಶಿವಣ್ಣನವರಿಗೆ ಅವಕಾಶ ಸಿಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ನಡುವೆ ಶಾಸಕ ಎಂ. ಕೃಷ್ಣಪ್ಪ ಅವರ ಮುನಿಸು ಮುಂದುವರಿದಿದ್ದು, ಅಧಿವೇಶನದಲ್ಲಿ ತಂದೆ ಮತ್ತು ಮಗ ಪ್ರಿಯಕೃಷ್ಣ ಎಲ್ಲಿಯೂ ಕಾಣಿಸಿರಲಿಲ್ಲ.

ನಾಗೇಂದ್ರ ಸೇರ್ಪಡೆ: ಸಿಎಂ ಸಮರ್ಥನೆ

ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರದ ಸಚಿವ ಸಂಪುಟ, ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಸಚಿವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಇಲ್ಲವೇ? ಈ ವಿಷಯದಲ್ಲಿ ಯಾಕೆ ಮಾತನಾಡುತ್ತಿಲ್ಲ? ನಮ್ಮ ರಾಜ್ಯದಲ್ಲಿ ಕಳೆದ ಸರಕಾರಗಳಲ್ಲಿ ಕಳಂಕಿತ ಸಚಿವರು ಇರಲಿ ಲ್ಲವೇ? ನಾಗೇಂದ್ರ ಅವರು ಪಕ್ಷದ ಶಿಸ್ತಿನ ಸಿಪಾಯಿ ಯಾಗಿ ಪಕ್ಷ ಹೇಳಿದಂತೆ ಕೇಳುತ್ತಾರೆ ಎಂದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ