ಶಿವಮೊಗ್ಗ : ಬಾಲಕನ ಸಮಾಧಿ ಮೇಲೆ ಯಾಕಿಷ್ಟು ದ್ವೇಷ ? – ಸಂಕೇತ್ ನ ಸಮಾಧಿ ಧ್ವಂಸಗೊಳಿಸಿದ ದುಷ್ಟರು !

ಶಿವಮೊಗ್ಗ, ಏ. 01 : ಫೆಬ್ರವರಿ 23ರಂದು ಅನ್ಯಕೋಮಿನ ಬಾಲಕರಿಂದ ಕೊಲೆಯಾಗಿದ್ದ ಸಂಕೇತ್ ಸಮಾಧಿಯನ್ನು ದುಷ್ಟರು ಧ್ವಂಸಗೊಳಿಸಿದ್ದಾರೆ. ಸಂಕೇತ್ ಅಂತ್ಯಕ್ರಿಯೆಯನ್ನು ಊರಗಡೂರಿನ ಗುಡ್ಡೇಮರಡಿ ದೇವಸ್ಥಾನದ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ನಡೆಸಲಾಗಿತ್ತು. ಪೋಷಕರು ಮಗ ಸಂಕೇತ್ ಫೋಟೋ ಹಾಕಿ ಚಿಕ್ಕದಾದ ಸಮಾಧಿಯನ್ನು ನಿರ್ಮಿಸಿದ್ದರು.

Advertisement

ಇದೀಗ ಸಂಕೇತ್ ಭಾವಚಿತ್ರವುಳ್ಳ ಗ್ರೈನೆಟ್ ಕಲ್ಲನ್ನು ದುಷ್ಕರ್ಮಿಗಳು ಒಡೆದ ಹಾಕಿದ್ದಾರೆ. ಕುಟುಂಬಸ್ಥರು ಪ್ರತಿ ಬುಧವಾರಕ್ಕೊಮ್ಮೆ ಸ್ಮಶಾನಕ್ಕೆ ತೆರಳಿ ಸಂಕೇತ್ ಸಮಾಧಿಗೆ ಪೂಜೆ ಸಲ್ಲಿಕೆ ಮಾಡುತ್ತಿದ್ದರು. ಇದೀಗ ಮಗ ಸಮಾಧಿ ಧ್ವಂಸಗೊಳಿಸಿರುವ ಸುದ್ದಿ ಕೇಳಿ ಸಂಕೇತ್ ಕುಟುಂಬ ಆಘಾತಕ್ಕೊಳಗಾಗಿದೆ. ಸಮಾಧಿ ಧ್ವಂಸ ಸಂಬಂಧ ಸಂಕೇತ್ ತಂದೆ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಗನ ಸಾವಿನ ಬಳಿಕ ಊಟವೂ ಸರಿಯಾಗಿ ಮಾಡಿಲ್ಲ : ಸಂಕೇತ್ ತಂದೆ ಅಳಲು

ನನ್ನ ಮಗ ಸತ್ತ ಮೇಲು ಸಮಾಧಿಯನ್ನು ಬಿಡಲಿಲ್ಲ ಹಾಳು ಮಾಡಿದ್ದಾರೆ. ನಮ್ಮ ಮೇಲೆ ದ್ವೇಷವಿದ್ದರೆ ನಮಗೆ ಏನಾದರೂ ಮಾಡಿಬಿಡಿ. ನಮ್ಮ ಮನೆಯಲ್ಲಿ ಈ ಘಟನೆ ಸಂಭವಿಸಿದ ಬೆನ್ನಲ್ಲೇ ಯಾರೂ ಸರಿಯಾಗಿ ಊಟ ಕೂಡ ಮಾಡುತ್ತಿಲ್ಲ . ಬುಧವಾರ ಹೂವಿನ ಹಾರ ಎಲ್ಲ ತೆಗೆದುಕೊಂಡು ಸಮಾಧಿಗೆ ಪೂಜೆ ಮಾಡಬೇಕು ಎಂದು ಕೊಂಡಿದ್ದೆವು. ಬಾಲಕನ ಫೋಟೋ ಇದ್ದ ಸಮಾಧಿಯ ಒಂದು ಭಾಗವನ್ನು ಒಡೆದು ಹಾಕಿದ್ದು, ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಸಂಕೇತ್ ತಂದೆ ಕುಮಾರ್ ಹೇಳಿದ್ದಾರೆ.

ನ್ಯಾಯಕ್ಕೆ ಆಗ್ರಹ

ಸಮಾಧಿ ಧ್ವಂಸ ಕುರಿತು ಸಂಕೇತ್ ಅಜ್ಜ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಎಲ್ಲಾದರೂ ಈ ರೀತಿ ಸಮಾಧಿ ಹೊಡೆಯುವುದು ಇದೆಯಾ? ಯಾಕೆ ಇಂಥ ದುಷ್ಕೃತ್ಯ ಮಾಡುತ್ತಾರೆ ಅವರಿಗೆ ಏನು ಮಾಡಿದ್ದೇವೆ ? ಸಿಎಂ ಸಿದ್ದರಾಮಯ್ಯನವರೇ ನಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಸಂಜೆ ಸುಮಾರು ಆರು ಗಂಟೆ ವೇಳೆಗೆ ನಮಗೆ ಸಮಾಧಿ ಕೆಡವಿದ ವಿಚಾರ ತಿಳಿಯಿತು. ಈ ಭಾಗದಲ್ಲಿ ಗಾಂಜಾ ಮೊದಲಾದ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ನಮ್ಮ ಮೊಮ್ಮಗನಿಗೆ ಸತ್ತ ಮೇಲೆ ಸಮಾಧಿಯಲ್ಲಿ ನೆಮ್ಮದಿಯಾಗಿರಲು ಬಿಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಏನಿದು ಪ್ರಕರಣ?

ಫೆಬ್ರವರಿ 23ರಂದು ರಾತ್ರಿ ಕ್ಲಾಸ್ ಮುಗಿಸಿಕೊಂಡು ಬರುವಾಗ ಸಂಕೇತ್ ಕೊಲೆಯಾಗಿತ್ತು. ಅನ್ಯಕೋಮಿನ ಬಾಲಕರು ಸಂಕೇತ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಘಟನೆ ಬಳಿಕ ಶಿವಮೊಗ್ಗ ನಗರದಲ್ಲಿ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಈ ಘಟನೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ರಾತ್ರಿಯಾದ್ರೆ ಮನೆಯಿಂದ ಹೊರಗೆ ಬರಲು ಭಯವಾಗುತ್ತೆ ಎಂದು ಸ್ಥಳೀಯರು ಆರೋಪಿಸಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.