ಬೆಳ್ತಂಗಡಿ, ಸೆ. 1 : ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಸವಣಾಲು ಗ್ರಾಮದ ಹನ್ಯಾಡಿ ಪಲ್ಕೆ ಎಂಬಲ್ಲಿ ನಡೆದಿದೆ.
ಹನ್ಯಾಡಿ ಪಲ್ಕೆಯ ಬಾಲಕೃಷ್ಣ ನಾಯ್ಕರವರ ಮನೆಯ ಅಂಗಳದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆಯಾಗಿದೆ.

ಚಿರತೆಯನ್ನು ಸ್ಥಳಾಂತರ ಮಾಡುವ ಕಾರ್ಯಾಚರಣೆಯನ್ನು ಶೀಘ್ರವಾಗಿ ನಡೆಸಲಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆಲ ಸಮಯದ ಹಿಂದೆ ಸ್ಥಳೀಯ ನಿವಾಸಿ ಗುರಿಕಂಡ ಆನಂದ ಶೆಟ್ಟಿ ಅವರ ಮನೆಯಲ್ಲಿ ಇಟ್ಟ ಬೋನಿಗೆ ಕೂಡ 2 ಚಿರತೆಗಳು ಸೆರೆಯಾಗಿದ್ದವು.




