ಕನ್ಯಾಡಿ ಸೇವಾಭಾರತಿ ವತಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ರಾಣೆಬೆನ್ನೂರಿನ ಕು. ಚೈತ್ರಾ ರವರಿಗೆ ಗಾಲಿಕುರ್ಚಿ ವಿತರಣೆ

ಸೌತಡ್ಕ, ಮಾ.12 : ಬೆಂಗಳೂರು APD ಸಂಸ್ಥೆಯ ಸಹಕಾರದೊಂದಿಗೆ ಪ್ರಸ್ತುತ ವರ್ಷದಲ್ಲಿ 100 ಗಾಲಿಕುರ್ಚಿಯನ್ನು ನೀಡುವ ಯೋಜನೆಯನ್ನು ಹೊಂದಿದ್ದು. ಅದರಂತೆ, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ 30 ಗಾಲಿಕುರ್ಚಿಗಳನ್ನು ವಿತರಿಸಲಾಗಿತ್ತು.

Advertisement

ಈ ತಿಂಗಳಲ್ಲಿ 32 ಗಾಲಿಕುರ್ಚಿಗಳನ್ನು ವಿತರಿಸುವುದಾಗಿ ನಿರ್ಧರಿಸಿದ್ದು ಅರ್ಹ ಫಲಾನುಭವಿ ರಾಣೆಬೆನ್ನೂರಿನ ಕು. ಚೈತ್ರಾ ರವರಿಗೆ ಸೌತಡ್ಕ ಸೇವಾಧಾಮ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಸಂಸ್ಥೆಯ ಹಿತೈಷಿ ಮತ್ತು ದಾನಿಗಳಾದ ಕೊಕ್ಕಡದ ಶ್ರೀ ಗಣೇಶ್ ಪಿ. ಐತಾಳ್ ರವರು ಗಾಲಿಕುರ್ಚಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀಯುತರು ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಒಂದು ಹೊತ್ತಿನ ಊಟದ ದೇಣಿಗೆಯನ್ನು ನೀಡಿ ಸಹಕರಿಸಿದರು. ಸೇವಾಭಾರತಿಯ ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಹಾಗೂ ಸಿಬ್ಬಂದಿ ವರ್ಗದವರು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ಧನ್ಯವಾದವಿತ್ತರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.