RSSಗೆ 100ನೇ ವರ್ಷದ ಸಂಭ್ರಮ : ಉಜಿರೆಯಲ್ಲಿ ಸೇವಾಭಾರತಿ ವತಿಯಿಂದ ದೀಪಾವಳಿ ಸ್ನೇಹ ಮಿಲನ

ಬೆಳ್ತಂಗಡಿ : ಕನ್ಯಾಡಿಯ ಸೇವಾಭಾರತಿ ಎಂಬ ಸಂಸ್ಥೆಯು ಸರಕಾರೇತರ ಸಂಸ್ಥೆಯಾಗಿದ್ದುಕೊಂದು ಸೇವೆ ಎಂಬ ಯಜ್ಞದಲ್ಲಿ ಕಳೆದ 21 ವರ್ಷಗಳಿಂದ ತನ್ನನ್ನು ತಾನು ತೊಡಗಿಸಿಕೊಂಡಿದೆ. ತಾಲೂಕಿನಲ್ಲೇ ಸೇವಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ಈ ಸಂಸ್ಥೆಯು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಇದೀಗ ಸೇವಾ ಭಾರತಿ ಸಂಸ್ಥೆಯ ವತಿಯಿಂದ ದೀಪಾವಳಿ ಸ್ನೇಹ ಮಿಲನ್ ಕಾರ್ಯಕ್ರಮವು ನವೆಂಬರ್ 9ನೇ ಆದಿತ್ಯವಾರದಂದು ಉಜಿರೆಯ ಶಾರದಾ ಮಂಟಪದಲ್ಲಿ ಸಂಜೆ 6:30ಕ್ಕೆ ನಡೆಯಲಿದೆ ಎಂದು ಸೇವಾಭಾರತಿ ಸಂಸ್ಥಾಪಕರಾದ ಶ್ರೀ ವಿನಾಯಕ್ ರಾವ್ ಮಾಹಿತಿ ನೀಡಿದ್ದಾರೆ.

Advertisement

ಕನ್ಯಾಡಿಯಲ್ಲಿ ಸ್ವಂತ ಜಾಗದಲ್ಲಿ ಕಟ್ಟಡ ಹೊಂದುವ ಕನಸನ್ನು ಸೇವಾಭಾರತಿ ನನಸು ಮಾಡಿಕೊಳ್ಳುವ ದಿನಗಳು ಹತ್ತಿರ ಬರುತ್ತಿವೆ. ಈ ನಿಟ್ಟಿನಲ್ಲಿ ನೂತನ ಕಟ್ಟಡದ ನೆಲಮಹಡಿಗೆ ಪ್ರಸ್ತುತವಿರುವ ಕಾರ್ಯಾಲಯ ಸೇವಾನಿಕೇತನವು ಸ್ಥಳಾಂತರಗೊಂಡು ಇನ್ನಷ್ಟು ಸಮಾಜಮುಖಿಯತ್ತ ದೃಷ್ಟಿ ಹಾಯಿಸಲಿದೆ. ಸಂಘಕ್ಕೆ 100ನೇ ವರ್ಷದ ಸಂಭ್ರಮಾಚರಣೆಯ ಶುಭಪರ್ವದಲ್ಲಿ ಈ ನೂತನ ಕಟ್ಟಡದಲ್ಲಿ ಕಾರ್ಯಾಲಯವು ಶುಭಾರಂಭಗೊಳ್ಳುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ. ಈ ನಿಟ್ಟಿನಲ್ಲಿ ನಮ್ಮ ಸೇವಾ ಕಾರ್ಯಕ್ಕೆ ಇನ್ನಷ್ಟು ವೇಗ ಕೊಡುವ ನಿಮಿತ್ತ ತಾಲೂಕಿನ ಹಿರಿಯ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಸೇರಿಸಿ ದೀಪಾವಳಿ ಸ್ನೇಹ ಮಿಲನ್ ನಡೆಯಲಿದೆ ಎಂದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.