ನಿಷೇಧಿತ ಪಾನ್‌ ಮಸಾಲಾ ಬ್ರ್ಯಾಂಡ್‌ಗೆ ʼಪ್ರಚಾರʼ – ಶಾರುಖ್‌ ಖಾನ್‌, ಅಜಯ್‌ ದೇವಗನ್‌, ಟೈಗರ್‌ ಶ್ರಾಫ್‌ ಗೆ ನೋಟೀಸ್

Advertisement

ಮಹಾರಾಷ್ಟ್ರ, ಆ. 16 : ವಿಮಲ್‌ ಇಲಾಯಿಚಿ ಹಾಗೂ ಪಾನ್‌ ಮಸಾಲಾ ಪ್ರಚಾರಕ್ಕೆ ಕುರಿತಂತೆ ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್‌ ಖಾನ್‌, ಅಜಯ್‌ ದೇವಗನ್‌ ಮತ್ತು ಟೈಗರ್‌ ಶ್ರಾಫ್‌ ಅವರಿಗೆ ಕಾರಣ ಕೇಳಿ ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಆಡಳಿತ ಇಲಾಖೆಯು ನೋಟಿಸ್‌ ನೀಡಿದೆ.

ನಿಷೇಧಿತ ಪಾನ್‌ ಮಸಾಲಾ ಬ್ರ್ಯಾಂಡ್‌ಗೆ ʼಪರೋಕ್ಷ ಪ್ರಚಾರʼ ನೀಡುತ್ತಿರುವ ಕುರಿತು ವಿವರಣೆ ಕೋರಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯಡಿ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಹಾರ ಮತ್ತು ಔಷಧಿ ಆಡಳಿತವೂ ಮೂವರು ನಟರಿಗೆ ತಮ್ಮ ಪಾತ್ರದ ಕುರಿತು ಲಿಖಿತ ವಿವರಣೆ ನೀಡಲು ಸೂಚನೆ ನೀಡಿದ್ದು, ನಿಯಮ ಉಲ್ಲಂಘನೆ ಸಾಬೀತಾದರೆ ಬೃಹತ್‌ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಯಿದೆ. ಈ ನಟರ ಅಧಿಕೃತ ಸಾಮಾಜಿಕ ಜಾಲತಾಣಗಳಿಂದ ಮತ್ತು ಇತರ ವೇದಿಕೆಗಳಿಂದ ಈ ಜಾಹೀರಾತು ಪ್ರಚಾರವನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ