ಮೂಡುಬಿದಿರೆ : ಹೆಚ್ಚು ಅಂಕ ಕೊಡಿಸುವುದಾಗಿ ಆಮಿಷವೊಡ್ಡಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ : ಶಿಕ್ಷಕನ ಬಂಧನ

Advertisement

ಮೂಡುಬಿದಿರೆ, ಜ. 16 : ವಿದ್ಯಾರ್ಥಿಗೆ ಹೆಚ್ಚು ಅಂಕ ಕೊಡಿಸುವುದಾಗಿ, ಸ್ಪೆಷಲ್ ಕ್ಲಾಸ್ ನೀಡುವುದಾಗಿ ಹೇಳಿ ನಗ್ನ ವಿಡಿಯೋ ಚಿತ್ರೀಕರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಕೃತ್ಯ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಶಾಲಾ ಶಿಕ್ಷಕ ಅಲ್ತಾಫ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ದೂರಿನ ಅನ್ವಯ, 2023ರಲ್ಲಿ ಸಂತ್ರಸ್ತ ಬಾಲಕ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗ, ಗಣಿತ ವಿಷಯದಲ್ಲಿ ಹೆಚ್ಚು ಅಂಕ ಕೊಡಿಸುವುದಾಗಿ ನಂಬಿಸಿದ ಶಿಕ್ಷಕ ಅಲ್ತಾಫ್, ಬಾಲಕನನ್ನು ಮೂಡುಬಿದಿರೆ ಹಳೆ ಮೀನು ಮಾರು ಕಟ್ಟೆ ಸಮೀಪವಿದ್ದ ತನ್ನ ಕೊಠಡಿಗೆ ಕರೆಸಿಕೊಂಡಿದ್ದನು. ಅಲ್ಲಿ ಬಾಲಕನಿಗೆ ಮಾದಕ ದ್ರವ್ಯ ಬೆರೆಸಿದ ಜ್ಯೂಸ್ ನೀಡಿ ಅರೆಪ್ರಜ್ಞಾವಸ್ಥೆಗೆ ತಲುಪಿಸಿ, ಆತನ ನಗ್ನ ವಿಡಿಯೋ ಚಿತ್ರೀಕರಿಸಿದ್ದನು. ನಂತರ ಆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ ಆರೋಪಿಯು, ವಿಷಯ ಯಾರಿಗಾದರೂ ತಿಳಿ ಸಿದರೆ ಪರೀಕ್ಷೆ ಬರೆಯಲು ಬಿಡುವುದಿಲ್ಲ ಮತ್ತು ಕೊಲೆ ಮಾಡುವುದಾಗಿ ಧಮ್ಮಿ ಹಾಕಿದ್ದನು ಎಂದು ಆರೋಪಿಸಲಾಗಿದೆ.

Advertisement

ಅಷ್ಟೇ ಅಲ್ಲದೆ, ಬಾಲಕನ ಮೇಲೆ ಬಲವಂತವಾಗಿ ಆಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದು, ವಿರೋಧಿಸಿದಾಗ ಬೆಲ್ಟ್ ನಿಂದ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಬಾಲಕನ ಆರೋಗ್ಯದಲ್ಲಿ ಏರುಪೇರಾದಾಗ ಅನುಮಾನಗೊಂಡ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರು ಮತ್ತು ಪೋಷಕರ ವಿಚಾರಣೆ ವೇಳೆ ಬಾಲಕನು ನಡೆದ ಘಟನೆಯನ್ನು ವಿವರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377, 324, 506 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ