ಟೆಹ್ರಾನ್ : ಅಮೆರಿಕ ಸೇರಿದಂತೆ ಎರಡು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿದ ಇರಾನ್ – ಓರ್ವ ಸಾವು, 38 ಸಿಬ್ಬಂದಿಯ ರಕ್ಷಣೆ

Advertisement

ಟೆಹ್ರಾನ್, ಮಾ. 12 : ಪರ್ಷಿಯನ್ ಗಲ್ಸ್ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಗುರುವಾರ (ಮಾ.12) ಇರಾಕ್‌ನ ಪ್ರಾದೇಶಿಕ ಸಮುದ್ರ ಗಡಿಯಲ್ಲಿ ಅಮೆರಿಕ ಸೇರಿದಂತೆ ಎರಡು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ ನಡೆಸಿದ ಪರಿಣಾಮ ಹಡಗುಗಳು ಬೆಂಕಿಗಾಹುತಿಯಾಗಿವೆ. ಈ ಘಟನೆಯಲ್ಲಿ ಭಾರತೀಯನೊಬ್ಬ ಸಾವನ್ನಪ್ಪಿದ್ದು, 38 ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮಾಲ್ವಾ ಮತ್ತು ಮಾರ್ಷಲ್ ಐಲ್ಯಾಂಡ್ಸ್ ಧ್ವಜದಡಿ ಸಂಚರಿಸುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳು ಇರಾಕ್‌ನ ಬಾಸ್ರಾ ಸಮೀಪದ ಉಮ್ ಕಸರ್ ಬಂದರು ಬಳಿ ಇದ್ದಾಗ ದಾಳಿಗೆ ಒಳಗಾಗಿವೆ. ಸ್ಫೋಟಕಗಳಿಂದ ತುಂಬಿದ ಬೋಟುಗಳು ಅಥವಾ ಡೋನ್‌ಗಳ ಮೂಲಕ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ದಾಳಿಯ ನಂತರ ಎರಡೂ ಹಡಗುಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಂತರ ಇರಾಕ್ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ 38 ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಆದರೆ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿ ವಿವರಿಸಿದೆ.

Advertisement

ಇರಾನ್ ಸ್ವಾಮಿತ್ವದ ಮಾಧ್ಯಮಗಳ ಪ್ರಕಾರ, ಪರ್ಷಿಯನ್ ಗಲ್‌ನಲ್ಲಿ “ಅಂಡರ್‌ವಾಟರ್ ಡ್ರೋನ್ ದಾಳಿ” ನಡೆಸಿ ಎರಡು ತೈಲ ಟ್ಯಾಂಕರ್‌ಗಳನ್ನು ಸ್ಫೋಟಗೊಳಿಸಲಾಗಿದೆ ಎಂದು ತಿಳಿಸಿದೆ. ಈ ದಾಳಿ ಮಧ್ಯಪ್ರಾಚ್ಯದ ಸಂಘರ್ಷದ ನಡುವೆ ಸಂಭವಿಸಿದ್ದು, ಜಾಗತಿಕ ತೈಲ ಸರಬರಾಜು ಮತ್ತು ಸಾಗಣೆ ಮಾರ್ಗಗಳ ಸುರಕ್ಷತೆ ಬಗ್ಗೆ ಮತ್ತಷ್ಟು ಆತಂಕ ಮೂಡಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ