ಶಿರ್ಲಾಲು : ಸಿಎ ಬ್ಯಾಂಕ್ ನಿವೃತ್ತ ನೌಕರರಿಗೆ ಅನ್ಯಾಯ ಆರೋಪ – ಬ್ಯಾಂಕ್ ಮುಂದೆ ಧರಾಣಿ ಕುಳಿತ ನಿವೃತ್ತ ಸಿಇಓ

Advertisement

ಶಿರ್ಲಾಲು, ಸೆ. 10 : ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ(ನಿ) ಶಿರ್ಲಾಲು ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕಳೆದ 5 ವರ್ಷಗಳಿಂದ ಅಮ್ಮಾಜಿ ಕೆ. ಎಂಬವರು ಸೇವೆ ಸಲ್ಲಿಸುತ್ತಿದ್ದು, ಇದೀಗ ಸರಕಾರದ ನಿಯಮದಂತೆ ವಯೋ ಸಹಜ ನಿವೃತ್ತಿಯಾಗಿದ್ದಾರೆ. ಈ ಮಧ್ಯೆ ನಿಯಮದಂತೆ ನಿವೃತ್ತ ಜೀವನಕ್ಕೆ ಆಧಾರವಾಗಬೇಕಾಗಿದ್ದ ಅಮ್ಮಾಜಿಯವರ ನಿವೃತ್ತ ಸೌಲಭ್ಯಗಳನ್ನು ಪಾವತಿ ಮಾಡುವಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಅಮ್ಮಾಜಿಯವರು ಗಂಭೀರವಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಧ್ವನಿ ನ್ಯೂಸ್ ಜೊತೆ ಮಾತನಾಡಿದ ಅವರು, ಎಷ್ಟು ಬಾರಿ ವಿನಮ್ರವಾಗಿ ಕೇಳಿಕೊಂಡರೂ ಇದು ವರೆಗೆ ಪಾವತಿ ಮಾಡಿರುವಿದಿಲ್ಲ. ನನ್ನ ಮಕ್ಕಳ ಉನ್ನತ ವಿಧ್ಯಾಭ್ಯಾಸದ ಈ ಸಮಯದಲ್ಲಿ ನಿವೃತ್ತ ಜೀವನದಲ್ಲಿ ಸಿಗಬೇಕಾದ ಸವಲತ್ತು ಸಿಗದೆ ಇರುವುದು ತುಂಬಾ ನೋವಾಗಿದೆ, ಇದರಿಂದ ನಾನು ಮಾನಸಿಕವಾಗಿ ನೊಂದಿದ್ದು ನನ್ನ ಆರೋಗ್ಯದ ಮೇಲೆ ಕೂಡ ಗಂಭೀರ ಪರಿಣಾಮ ಬೀರಿದೆ.

ಎಷ್ಟು ಬಾರಿ ಬೇಡಿಕೊಂಡರು ಸಮಾಜದ ಗಣ್ಯರ ಸಮಕ್ಷಮ ಮಾತುಕತೆಗಳು ನಡೆದರೂ ನಾನು ಪ್ರಾಮಾಣಿಕವಾಗಿ ದುಡಿದು ಸಂಪಾದಿಸಿದ ನನ್ನ ನಿವೃತ್ತ ವೇತನ ಸೌಲಭ್ಯಗಳನ್ನು ಆಡಳಿತ ಮಂಡಳಿ ಪಾವತಿ ಮಾಡಲು ಒಪ್ಪದೆ ಒರಟಾಗಿ ಅಮಾನವೀಯವಾಗಿ ವರ್ತಿಸಿರುವುದರಿಂದ ನ್ಯಾಯಕ್ಕಾಗಿ ಸೆ. 10ರಂದು ಬೆಳಿಗ್ಗೆ  ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಕುಟುಂಬ ಸಮೇತ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹಿಸುತ್ತೇನೆ ಎಂದರು.

ಅವರ ಜೊತೆಗೆ ಆಡಳಿತ ಮಂಡಳಿಯಿಂದ ಅನ್ಯಾಯಕ್ಕೊಳಗಾದ ಸಂಸ್ಥೆಯ ಇನ್ನೊಬ್ಬ ಸಿಬ್ಬಂದಿ ಪ್ರಭಾಕರ ಎನ್ ಕೂಡ ಧರಣಿ ಕುಳಿತುಕೊಂಡಿದ್ದಾರೆ ಎಂದರು.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ