ಎಲ್‌ಪಿಜಿ ಹೊತ್ತ ಶಿವಾಲಿಕ್ ಹಡಗು ನವ ಮಂಗಳೂರು ಬಂದರಿಗೆ ಆಗಮಿಸುವುದಿಲ್ಲ…!

Advertisement

ಮಂಗಳೂರು, ಮಾ. 19 : ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯ ಮೂಲಕ ಹಾದು ಬಂದು, ಸೋಮವಾರ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿದ್ದ ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಹಡಗು ನವ ಮಂಗಳೂರು ಬಂದರಿಗೆ ಆಗಮಿಸುವುದಿಲ್ಲ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.

“ಶಿವಾಲಿಕ್ ಹಡಗಿನಿಂದ ಸುಮಾರು 20,000 ಟನ್‌ ಎಲ್‌ಪಿಜಿಯನ್ನು ಮುಂದ್ರಾ ಬಂದರಿನಲ್ಲಿ ಇಳಿಸಲಾಗುತ್ತದೆ. ಉಳಿದ ಸುಮಾರು 26,000 ಟನ್ ಎಲ್‌ಪಿಜಿಯೊಂದಿಗೆ ಹಡಗು ಬುಧವಾರ ನವ ಮಂಗಳೂರು ಬಂದರಿಗೆ ಬರಲಿದೆ ಎಂಬ ಮಾಹಿತಿಯಿತ್ತು. ಆದರೆ, ಈಗ ಈ ಹಡಗು ಇಲ್ಲಿಗೆ ಬರುತ್ತಿಲ್ಲ” ಎಂದು ನವ ಮಂಗಳೂರು ಬಂದರಿನ ಮೂಲಗಳು ತಿಳಿಸಿವೆ.

ಶಿವಾಲಿಕ್ ಹಡಗಿನಲ್ಲಿದ್ದ ಎಲ್‌ಪಿಜಿಯ ಒಂದು ಭಾಗವನ್ನು ಈಗಾಗಲೇ ಮುಂದ್ರಾ ಬಂದರಿನಲ್ಲಿ ಇಳಿಸಲಾಗಿತ್ತು. ಉಳಿದ ಭಾಗವನ್ನು ಗುಜರಾತ್‌ನ ದಹೇಜ್ ಟರ್ಮಿನಲ್‌ನಲ್ಲಿ ಇಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ನಡುವೆ, ಎಚ್‌ಪಿಸಿಎಲ್‌ಗೆ ಎಲ್‌ಪಿಜಿ ಪೂರೈಸುವ ಮತ್ತೊಂದು ಹಡಗು ಈ ತಿಂಗಳ 20ರ ನಂತರ ನವ ಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿದೆ.

“ನಮ್ಮ ಕಂಪನಿಗೆ ಎಲ್‌ಪಿಜಿ ಪೂರೈಸುವ ಹಡಗು ಸದ್ಯ ಮಂಗಳೂರಿನತ್ತ ಬರುತ್ತಿದೆ. ಆದರೆ, ಆ ಹಡಗಿನಲ್ಲಿರುವ ಒಟ್ಟು ಸರಕಿನ ಪೈಕಿ ಎಷ್ಟು ಪ್ರಮಾಣದ ಎಲ್‌ಪಿಜಿಯನ್ನು ಇಲ್ಲಿ ಇಳಿಸಲಾಗುತ್ತದೆ ಎಂಬ ಬಗ್ಗೆ ಇನ್ನು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ” ಎಂದು ಎಚ್‌ಪಿಸಿಎಲ್‌ ಮೂಲಗಳಿಂದ ತಿಳಿದುಬಂದಿದೆ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ