ಕೊಲ್ಲುವ ಮೊದಲು ಮನೆಗೆ ಕರೆದು ಹೊಟ್ಟೆ ತುಂಬ ಊಟ ಹಾಕಿದ್ದ ಗೆಳೆಯ : ಪತ್ನಿ ಮತ್ತು ಸ್ನೇಹಿತನನ್ನೇ ಗುಂಡಿಕ್ಕಿ ಕೊಂದ ಪತಿ !

ಗಾಜಿಯಾಬಾದ್, ಮಾ. 26 : ಉತ್ತರ ಪ್ರದೇಶದ ಗಾಜಿಯಾಬಾದ್‌ನ ಟ್ರೋನಿಕಾ ಸಿಟಿ ಪೊಲೀಸ್ ವ್ಯಾಪ್ತಿಯ ರಾಂಪಾರ್ಕ್ ಕಾಲೋನಿಯಲ್ಲಿ ಸೋಮವಾರ ತಡರಾತ್ರಿDouble Murder ಘಟನೆಯೊಂದು ನಡೆದಿದೆ. ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಪ್ತ ಸ್ನೇಹಿತನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

Advertisement

ಆರೋಪಿ ರಶೀದ್ (38), ತನ್ನ ಸಹೋದ್ಯೋಗಿ ಹಾಗೂ ಆಪ್ತ ಗೆಳೆಯ ಫಹೀಮ್ (32) ಅವರನ್ನು ಸೋಮವಾರ ರಾತ್ರಿ ಭೋಜನಕ್ಕೆ ಆಹ್ವಾನಿಸಿದ್ದ. ಸುಮಾರು ಮೂರು ಗಂಟೆಗಳ ಕಾಲ ಮೂವರೂ ಒಟ್ಟಿಗೆ ಕುಳಿತು ಊಟ ಮಾಡಿ, ಧೂಮಪಾನ ಮಾಡಿದ್ದರು. ಎಲ್ಲವೂ ಸುಸೂತ್ರವಾಗಿದೆ ಎನ್ನುವಾಗಲೇ ರಶೀದ್ ತನ್ನ ಪತ್ನಿ ಶಬ್ನಮ್ (36) ಮತ್ತು ಫಹೀಮ್ ನಡುವಿನ ಅನೈತಿಕ ಸಂಬಂಧದ ವಿಷಯವನ್ನು ಪ್ರಸ್ತಾಪಿಸಿದ್ದಾನೆ.

ಮಗನ ಕಣ್ಣೆದುರೇ ಹೆಂಡತಿ, ಗೆಳೆಯನ ಶಿಕಾರಿ!

ಮಾತು ಬೆಳೆದು ವಾಗ್ವಾದ ತಾರಕಕ್ಕೇರಿದಾಗ, ರಶೀದ್ ಅಲ್ಮಾರಾದಲ್ಲಿ ಬಚ್ಚಿಟ್ಟಿದ್ದ ಪಿಸ್ತೂಲನ್ನು ಹೊರತೆಗೆದಿದ್ದಾನೆ. ಪಕ್ಕದ ಕೋಣೆಯಲ್ಲಿದ್ದ ದಂಪತಿಯ 7 ವರ್ಷದ ಮಗ ಜೋರು ಧ್ವನಿ ಕೇಳಿ ಓಡಿ ಬಂದಿದ್ದಾನೆ. ಮಗನ ಕಣ್ಣೆದುರೇ ರಶೀದ್ ಮೊದಲು ಫಹೀಮ್ ತಲೆಗೆ ಗುಂಡಿಕ್ಕಿದ್ದಾನೆ, ನಂತರ ಪತ್ನಿ ಶಬ್ನಮ್ ಮೇಲೆ ಗುಂಡಿನ ಮಳೆಗರೆದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ನೋಡಿ ಬೆಚ್ಚಿಬಿದ್ದ ಮಗನಿಗೆ, “ಈಗ ಎಲ್ಲವೂ ಸರಿಯಾಗುತ್ತದೆ” ಎಂದು ಹೇಳಿ ರಶೀದ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಕೊಲೆಗೆ ಕಾರಣ :

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶಬ್ನಮ್ ಮತ್ತು ಫಹೀಮ್ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದರು. ಆರು ತಿಂಗಳ ಹಿಂದೆ ಹಿರಿಯ ಮಗನ ಮದುವೆಯ ಸಂದರ್ಭದಲ್ಲಿ ರಶೀದ್‌ಗೆ ಈ ವಿಷಯ ತಿಳಿದು ಮನೆಯಲ್ಲಿ ಜಗಳ ಆರಂಭವಾಗಿತ್ತು. ಶಬ್ನಮ್ ವಿಚ್ಛೇದನ ನೀಡಲು ನಿರ್ಧರಿಸಿ, ತನ್ನ ಹೆಸರಿನಲ್ಲಿದ್ದ ಮನೆಯನ್ನು ಮಾರಾಟ ಮಾಡಲು ಯೋಜಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ರಶೀದ್, ಸ್ನೇಹಿತನನ್ನು ಮನೆಗೆ ಕರೆಸಿಕೊಂಡು ಈ ಭೀಕರ ಕೃತ್ಯ ಎಸಗಿದ್ದಾನೆ.

ಅನಾಥರಾದ 07 ಮಕ್ಕಳು !

ಈ ದಂಪತಿಗೆ 1.5 ವರ್ಷದಿಂದ 20 ವರ್ಷದೊಳಗಿನ ಒಟ್ಟು ಏಳು ಮಕ್ಕಳಿದ್ದಾರೆ. ತಂದೆ ಜೈಲು ಪಾಲಾಗುವ ಭೀತಿ, ತಾಯಿ ಸಾವನ್ನಪ್ಪಿದ ದುಃಖದ ನಡುವೆ ಈ ಏಳು ಮಕ್ಕಳು ಈಗ ಬೀದಿಗೆ ಬಿದ್ದಿದ್ದಾರೆ. ಆರೋಪಿ ರಶೀದ್ ಮತ್ತು ಮೃತ ಫಹೀಮ್ ಇಬ್ಬರೂ ಈ ಹಿಂದೆ ಕಳ್ಳತನ ಮತ್ತು ಕೊಲೆಯತ್ನದಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ರಶೀದ್ ಪತ್ತೆಗೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದಾರೆ. 7 ವರ್ಷದ ಬಾಲಕನ ಹೇಳಿಕೆಯನ್ನೇ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ತನಿಖೆ ಮುಂದುವರಿಸಲಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.