ಬೆಳ್ತಂಗಡಿ : ವಿದ್ಯಾರ್ಥಿ ಶ್ರವಣ್ ಸಾವಿಗೆ ಶಿಕ್ಷಕಿಯೊಬ್ಬರ ಕಿರುಕುಳ ಕಾರಣವೇ? – ಡೆತ್ ನೋಟ್ ವೈರಲ್ !!

Advertisement

ಬೆಳ್ತಂಗಡಿ, ಸೆ. 03 : ವಾರದ ಹಿಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಬಂದಾರು ಗ್ರಾಮದ ಮೈರೋಳಡ್ಕ ಸಮೀಪದ ನಿವಾಸಿ ವಿದ್ಯಾರ್ಥಿಯ ಸಾವಿಗೆ ಶಿಕ್ಷಕಿಯೊಬ್ಬರ ಕಿರುಕುಳವೇ ಕಾರಣವಾಗಿತ್ತೆಂಬ ಆರೋಪ ಬಲವಾಗಿ ಕೇಳಿ ಬರುತ್ತಿದ್ದು ಇದೀಗ ವೈರಲ್ ಆಗುತ್ತಿರುವ ಬಾಲಕ ಬರೆದಿಟ್ಟಿದ್ದ ಎನ್ನಲಾದ ಡೆತ್ ನೋಟ್ ಒಂದು ಪುಷ್ಠಿ ನೀಡುತ್ತಿದೆ.

ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬೈಪಾಡಿ ಸಮೀಪದ ಕುರಿಯಾಳ ನಿವಾಸಿ ಭರತ್ ಗೌಡ ಎಂಬವರ ಪುತ್ರ, ಬೆಳ್ತಂಗಡಿ ವಾಣಿ ಪ್ರೌಢ ಶಾಲಾ 9ನೇ ತರಗತಿ ವಿದ್ಯಾರ್ಥಿ ಶ್ರವಣ್ ಬಿ.ಕೆ. (14ವ) ಆಗಸ್ಟ್ 30ನೇ ಕಳೆದ ಬುಧವಾರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಘಟನೆಯ ಬೆನ್ನಲ್ಲೇ ಕೆಲವು ಆರೋಪಗಳು ಕೇಳಿ ಬಂದಿದ್ದು ಸಂಶಯಕ್ಕೂ ಕಾರಣವಾಗಿತ್ತು. ಕಳೆದ ಪರೀಕ್ಷೆಯಲ್ಲಿ ಬಾಲಕನಿಗೆ ಕಡಿಮೆ ಅಂಕಗಳು ಬಂದಿದ್ದು ಇದೇ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪ್ರಕರಣ ದಾಖಲಾಗಿತ್ತು.

ಕಳೆದ ಮಂಗಳವಾರ ಆ 29ರಂದು ಸಂಜೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಕ ಆ.30 ರಂದು ಮನೆಯ ಬಳಿಯ ಕೊಟ್ಟಿಗೆಯಲ್ಲಿ ಶಾಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು

ಈ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ: 64/2926-ಕಲಂ :194 ಭಾ.ನಾ.ಸು.ಸಂ. 2023ರಂತೆ ಪ್ರಕರಣ ದಾಖಲಾಗಿತ್ತು.

ಆದರೆ ಇದೀಗ ವಾರದ ಬಳಿಕ ಬಾಲಕನ ಆತ್ಮಹತ್ಯೆ ಪ್ರಕರಣವು ಸ್ಥಳೀಯವಾಗಿ ಮತ್ತೆ ಮುನ್ನೆಲೆಗೆ ಬಂದಿದ್ದು ಬಾಲಕ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಎನ್ನಲಾದ ಡೆತ್ ನೋಟ್ ನಲ್ಲಿ ಶಿಕ್ಷಕಿಯ (ಹೆಸರಿದೆ) ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿತ್ತು ಎಂಬ ಅಂಶ ಇದೀಗ ಬೆಳಕಿಗೆ  ಬಂದಿದೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ