ಮೈಸೂರು : ಬಾಂಬ್ ದಾಳಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ : ಸಿದ್ಧರಾಮಯ್ಯ

Advertisement

ಮೈಸೂರು : ಬಾಂಬ್ ಬ್ಲಾಸ್ಟ್ ಆಗಲೇಬಾರದು. ಅಮಾಯಕ ಜನರು ಬಲಿಯಾಗಿದ್ದಾರೆ. ಒಂದು ಪತ್ರಿಕೆಯಲ್ಲಿ ಮೂರು ಜನ, ಒಂದರಲ್ಲಿ‌ ಎಂಟು ಜನ ಬರೆದಿದ್ದಾರೆ. ಸಾವು ಸಾವುಗಳೇ, ಆ ಘಟನೆ ನಡೆಯಬಾರದು. ದೆಹಲಿಯ ಕೆಂಪುಕೋಟೆ ಬಳಿಯೇ ನಡೆದಿದೆ. ದಾಳಿ ಕುರಿತಂತೆ ನಾನು ಮಾಹಿತಿ ಕಲೆ ಹಾಕ್ತೀದ್ದೀನಿ. ಮೃತರ ಕುಟುಂಬದ ಜೊತೆ ನಾನು ಇರ್ತೀನಿ. ಚುನಾವಣೆ ವೇಳೆಯೇ ಘಟನೆ ನಡೆಯುವುದು ನನಗೆ ಗೊತ್ತಿಲ್ಲ. ಬಿಹಾರ ಚುನಾವಣೆ ವೇಳೆಯೇ ಇಂತಹ ಘಟನೆ ನಡೆದಿದೆ. ಬಾಂಬ್ ದಾಳಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಿಜೆಪಿ ವಿರುದ್ಧವಾಗಿ ಪರಿಣಾಮ ಬೀರಬಹುದು. ಕಾಂಗ್ರೆಸ್ ಪರವಾಗಿ ಅದು ವರ್ಕ್ ಆಗಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಇನ್ನು, ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣ ಹೆಚ್ಚಳ ಸಂಬಂಧಿಸಿದಂತೆ ಮೂರು ಜನ ಹುಲಿ ದಾಳಿಗೆ ಮೃತರಾಗಿದ್ದಾರೆ. ಹುಲಿಗಳು, ಆನೆಗಳ ಸಂಖ್ಯೆ ಹೆಚ್ಚಳವಾಗಿದೆ. ಅರಣ್ಯಾಧಿಕಾರಿಗಳ ಉತ್ತರದಿಂದ ನಾನು ಸಮಾಧಾನವಾಗಿಲ್ಲ. ಕಾಡಿನೊಳಗೆ ನೀರು, ಮೇವು ಸಮೃದ್ಧವಾಗಿ ಸಿಗಬೇಕು. ಲ್ಯಾಂಟೆನ ಹೆಚ್ಚಾಗಿ ಕಾಡಿನಲ್ಲಿ ಬೆಳೆದಿದೆ. ಅದನ್ನ ಕ್ಲೀನ್ ಮಾಡಿ, ಕೆರೆ, ಗುಂಡಿಗಳಲ್ಲಿ‌ ನೀರು ಸಿಗಬೇಕು. ಅದನ್ನ ಕಟ್ಟು ನಿಟ್ಟಾಗಿ ಮಾಡಲೇಬೇಕು ಎಂದು ಸೂಚಿಸಿದ್ದೇನೆ. ಹುಲಿ ದಾಳಿಗೆ ವೈಜ್ಞಾನಿಕ ಕಾರಣ ಹುಡುಕಲು ರಾಜ್ಯಮಟ್ಟದ ಸಭೆ ಮಾಡುತ್ತೇನೆ. ಮುಂದಿನ ವಾರ ಅರಣ್ಯಸಚಿವರು, ಅಧಿಕಾರಿಗಳ ಜೊತೆ ಸಭೆ ನಡೆಸುವೆ. ರೈಲ್ವೆ ಬ್ಯಾರಿಕೇಡ್ ಎಲ್ಲಾ ಕಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಅದನ್ನ ನಿಲ್ಲಿಸಿಬಿಟ್ಟಿದ್ರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಸೇರಿ ಎಲ್ಲರ ಜೊತೆ ಮೀಟಿಂಗ್ ಮಾಡುವೆ. ಕಾಡಿನಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ತಂತಿ ಬೇಲಿ ಉಪಯೋಗವಿಲ್ಲ. ಅದನ್ನ ತುಳಿದು ಆನೆಗಳು ದಾರಿ ಮಾಡಿಕೊಳ್ಖುತ್ತವೆ. ಒಂದು ವರ್ಷದಲ್ಲಿ ಎಲ್ಲೆಲ್ಲಿ ಅಗತ್ಯವಿದೆ ಅಲ್ಲೆಲ್ಲ ಬ್ಯಾರಿಕೇಡ್ ಅಳವಡಿಸಲಾಗುವುದು. ಪ್ರಾಣಿಗಳು ಕಾಡಿನಿಂದ ಹೊರಬರದಂತೆ ಕಾವಲು ಕಾಯುವ ಕೆಲಸ ಮಾಡಲಾಗುವುದು ಎಂದರು.

Advertisement

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ ಮಾಡಬೇಕು. ಕೆಲವರು ಕೇಂದ್ರ ಸ್ಥಾನದಲ್ಲಿ ವಾಸ ಮಾಡುತ್ತಿಲ್ಲ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಹೋಗುತ್ತಾರೆ. ಇದು ಸರಿಯಾದ ಪದ್ಧತಿಯಲ್ಲ ಎಂದು ಗ್ರಾಪಂ ಪಿಡಿಓ, ಅಧಿಕಾರಿಗಳು, ತಾಲ್ಲೂಕು ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದರು. ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿ ವಾಸ ಮಾಡುವ ಅಧಿಕಾರಿಗಳ ವರದಿ ಕೇಳಿದ್ದೇನೆ. ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ಸೂಚನೆ ನೀಡಿದ್ದೇನೆ ಎಂದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ