ಸಿಂಧನೂರು : ಲಾರಿ ಮತ್ತು ಹಾಲಿನ ಟ್ಯಾಂಕ‌ರ್ ನಡುವೆ ಭೀಕರ ಅಪಘಾತ – ಓರ್ವ ಸಾವು, ಮೂವರಿಗೆ ಗಾಯ

ಸಿಂಧನೂರು, ಮಾ. 17 : ತಾಲ್ಲೂಕಿನ ಹಂಚಿನಾಳ ಕ್ಯಾಂಪ್ ಬಳಿ ಮಂಗಳವಾರ ಬೆಳಗ್ಗೆ ಲಾರಿ ಮತ್ತು ಹಾಲಿನ ಟ್ಯಾಂಕ‌ರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಲಾರಿ ಚಾಲಕ ಸಾವನ್ನಪ್ಪಿದರೆ, ಹಾಲಿನ ಟ್ಯಾಂಕರ್ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಮೂವರಿಗೆ ಗಾಯಗಳಾಗಿವೆ.

Advertisement

ಗೊಬ್ಬರ ತುಂಬಿದ ಲಾರಿಯ ಚಾಲಕ ರಾಯಚೂರಿನ ಸಿಯಾತಲಾಬ್ ನ ನಿವಾಸಿ ಶೇಖ್ ಅಬ್ದುಲ್ಲಾ (23) ಮೃತ ವ್ಯಕ್ತಿ. ಹಾಲಿನ ಟ್ಯಾಂಕ‌ರ್ ಚಾಲಕ ಶ್ರೀಕಾಂತ ಎನ್ನುವವನ ಸ್ಥಿತಿ ಗಂಭೀರವಾಗಿದ್ದು, ಇಸಾಕ್ ಹಾಗೂ ರಾಜಾಸಾಬ್ ಎಂಬವರಿಗೆ ಗಾಯಗಳಾಗಿವೆ.

ಗೊಬ್ಬರ ತುಂಬಿದ ಲಾರಿ ಸಿಂಧನೂರಿನಿಂದ ಕಾರಟಗಿ ಕಡೆಗೆ ಹೊರಟಿದ್ದು, ಹಾಲಿನ ಟ್ಯಾಂಕರ್ ಕಾರಟಗಿಯಿಂದ ಸಿಂಧನೂರಿನ ಕಡೆಗೆ ಬರುವಾಗ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಬೈಕ್, ಲಾರಿಗೆ ಢಿಕ್ಕಿ ಹೊಡೆದಿದ್ದು, ಬೈಕ್ ನಲ್ಲಿದ್ದ ಕಾರಟಗಿ ತಾಲ್ಲೂಕಿನ ಗುಂಡೂರು ಗ್ರಾಮದ ಆಂಜನೇಯ, ವಿರೂಪಾಕ್ಷಿ ಮತ್ತು ಕರಿಬಸಪ್ಪ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.

ಘಟನೆಯ ತೀವ್ರತೆಗೆ ಲಾರಿ, ಹಾಲಿನ ಟ್ಯಾಂಕ್ ಮತ್ತು ಬೈಕ್ ನಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನಲೆ ಕೆಲ ಕಾಲ ಸಂಚಾರಿ ಸಮಸ್ಯೆ ಎದುರಾಯಿತು.
ಡಿವೈಎಸ್ಪಿ ಚಂದ್ರಶೇಖರ್, ಗ್ರಾಮೀಣ ಸಿಪಿಐ ವಿನಾಯಕ, ಪಿಎಸ್‌ಐ ಮೌನೇಶ್ ಅವರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.