ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ SIR ಪ್ರಕ್ರಿಯೆ – ಅಕ್ರಮ ವಲಸಿಗರು ಪರಾರಿ ! ನಕಲಿ ಆಧಾರ್ ಮಾಡಿಕೊಟ್ಟವರ ಎದೆ ಢವ-ಢವ…!

ಕೋಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ( SIR ) ಪ್ರಕ್ರಿಯೆ ಚಾಲ್ತಿಯಲ್ಲಿದೆ. ಡಿಸೆಂಬರ್ ನಾಲ್ಕರಂದು ಈ ಪ್ರಕ್ರಿಯೆ ಮುಗಿಯಬೇಕು ಎನ್ನುವ ಟಾರ್ಗೆಟ್ ಅನ್ನು ಕೇಂದ್ರ ಚುನಾವಣಾ ಆಯೋಗ ಹಾಕಿಕೊಂಡಿದೆ. ಈ ಡೆಡ್ಲೈನ್ ಇಂದಾಗಿ, ಅನಾವಶ್ಯಕವಾಗಿ ಬಿಎಲ್ಒಗಳ ( Booth Level Officers ) ಮೇಲೆ ಒತ್ತಡ ಬೀಳುತ್ತಿದೆ ಎನ್ನುವುದು ವಿಪಕ್ಷಗಳ ಅದರಲ್ಲೂ ಪ್ರಮುಖವಾಗಿ, ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿಯವರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕಳೆದ ಮೂರು ವಾರಗಳಿಂದ, ಅವ್ಯಾಹತವಾಗಿ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾದೇಶಿಗಳು ದೇಶವನ್ನು ತೊರೆಯುತ್ತಿರುವ ಸುದ್ದಿ ದೊಡ್ಡ ಚರ್ಚೆಯಲ್ಲಿದೆ. ತಮ್ಮ ದೇಶಕ್ಕೆ ವಾಪಸ್ ಆಗುತ್ತಿರುವವರ ಹೇಳಿಕೆಯ ಪ್ರಕಾರ, ಹಲವು ದಶಕಗಳಿಂದ, ನಕಲಿ ಕಾರ್ಡ್ ಅನ್ನು ಬಳಸಿಕೊಂಡು, ಇಲ್ಲಿನ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ, ಭಾರತೀಯರ ತೆರಿಗೆ ಹಣ, ಯಾರೋ ಅಕ್ರಮಿಗಳ ಪಾಲಾಗುತ್ತಿದೆ. ಕೈಯಲ್ಲಿ ಸಣ್ಣ ಚೀಲ, ಪ್ಲಾಸ್ಟಿಕ್ ಬಾಟಲಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಮಕ್ಕಳು, ಮಹಿಳೆಯರು ಸೇರಿದಂತೆ, ಮೌನವಾಗಿ ಅಕ್ರಮ ಬಾಂಗ್ಲಾದೇಶಿಗಳು ಮೌನವಾಗಿ ನಿಂತಿದ್ದರು. ಬಿಎಸ್ಎಫ್ ಸಿಬ್ಬಂದಿಗಳ ಪ್ರಶ್ನೆಗೆ ಅವರುಗಳು ಕೊಟ್ಟ ಉತ್ತರ ನಿಜಕ್ಕೂ ಶಾಕ್ ಆಗುವಂತೆ ಇತ್ತು. ಯಾಕೆಂದರೆ, ಪಶ್ಚಿಮ ಬಂಗಾಳದ ದಳ್ಳಾಳಿಗಳು, ಅವರಿಗೆಲ್ಲಾ, ನಕಲಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯನ್ನು ಮಾಡಿಸಿಕೊಟ್ಟಿದ್ದರು. ಬಿಎಸ್ಎಫ್ ಸಿಬ್ಬಂದಿಗಳಲ್ಲಿ ಅವರುಗಳು ಮಾಡುತ್ತಿರುವ ಏಕೈಕ ಮನವಿ ಏನಂದರೆ, ನಮಗೇನು ತೊಂದರೆ ಕೊಡಬೇಡಿ, ನಮ್ಮನ್ನು ನಮ್ಮ ದೇಶದ ಮನೆಗೆ ಹೋಗಲು ಬಿಡಿ ಎನ್ನುವುದು. ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಭದ್ರತಾ ಸಿಬ್ಬಂದಿಗಳು ಮತ್ತು ಸ್ಥಳೀಯರ ಪ್ರಕಾರ, ನವೆಂಬರ್ ನಲ್ಲಿ ಏನು ಎಸ್ಐಆರ್ ಪ್ರಕ್ರಿಯೆ ಆರಂಭವಾಯಿತೋ ಅಲ್ಲಿಂದ, ಅಕ್ರಮ ವಲಸೆಗಿರು ಸಾವಿರಾರು ಸಂಖ್ಯೆಯಲ್ಲಿ ದೇಶವನ್ನು ಖಾಲಿ ಮಾಡುತ್ತಿದ್ದಾರೆ.

ಭಾರತೀಯ ಪೌರತ್ವದ ಸೂಕ್ತ ದಾಖಲೆಯಿಲ್ಲದೇ ಇರುವುದರಿಂದ, ದೇಶ ಖಾಲಿ ಮಾಡುತ್ತಿರುವವರ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. SIR ಪ್ರಕ್ರಿಯೆ, ಡಿಸೆಂಬರ್ ನಲ್ಲಿ ಮುಗಿಯುತ್ತಿರುವ ಹಿನ್ನಲೆಯಲ್ಲಿ, ಆ ದಿನಾಂಕದೊಳಗೆ ಭಾರತವನ್ನು ಖಾಲಿ ಮಾಡಲು, ಅಕ್ರಮ ಬಾಂಗ್ಲಾದೇಶಿಗಳು ಮುಂದಾಗಿದ್ದಾರೆಂದು, ಪಶ್ಚಿಮ ಬಂಗಾಳದ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಯಾಕಾಗಿ, ಒಂದೇ ಸಮನೆ, ಅಕ್ರಮ ಬಾಂಗ್ಲಾದೇಶಿಗಳು ದೇಶ ತೊರೆಯುತ್ತಿದ್ದಾರೆ ಎನ್ನುವುದಕ್ಕೆ ಇದನ್ನು ನೇರವಾಗಿ SIR ಪ್ರಕ್ರಿಯೆಗೆ ಜೋಡಿಸಲಾಗುತ್ತಿದೆ. ಇದೊಂದು, ಮುಂದೊಂದು ದಿನ ಬಂಧನಕ್ಕೆ ಕಾರಣವಾಗಬಹುದು ಎನ್ನುವುದು ಇವರ ಭೀತಿಗೆ ಕಾರಣವಾಗಿದೆ. ಇವರೆಲ್ಲರೂ, ಮಧ್ಯವರ್ತಿಗಳ ಮೂಲಕ ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದರು. ಈಗ, ಇವರಿಗೆ ನಕಲಿ ಕಾರ್ಡ್ ಮಾಡಿಸಿಕೊಟ್ಟವರೂ ಭಯಭೀತರಾಗಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.