ಬೆಳ್ತಂಗಡಿ : ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ನಾಗರ ಹಾವು ಕಡಿತ – ಮಹಿಳೆ ಸಾವು

ಬೆಳ್ತಂಗಡಿ, ಡಿ. 22 : ತಾಲೂಕಿನ ಶಿಶಿಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಯೊಬ್ಬರು ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಡಿ.21ರಂದು ನಡೆದಿದೆ. ಶಿಶಿಲ ಗ್ರಾಮದ ಗುಡ್ಡೆ ತೋಟ ನಿವಾಸಿ ಪ್ರೇಮ (55) ಮೃತ ಮಹಿಳೆಯಾಗಿದ್ದಾರೆ. ಮದ್ಯಾಹ್ನದ ವೇಳೆ ತೋಟದಲ್ಲಿ ಕೆಲಸ ನಿರತವಾಗಿದ್ದಾಗ ನಾಗರ ಹಾವು ಕಡಿದಿದೆ ಎಂದು ಹೇಳಲಾಗಿದೆ.

Advertisement

ಹಾವು ಕಡಿದ ಕೂಡಲೇ ಶೌರ್ಯ ವಿಪತ್ತು ತಂಡದ ಸದಸ್ಯರ ಸಹಾಯದೊಂದಿಗೆ ಪ್ರೇಮ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವಿಷದ ತೀವ್ರ ಪರಿಣಾಮದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪುತ್ರಿ ಹಾಗೂ ಪುತ್ರರನ್ನು ಅಗಲಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕಾಡಾನೆ ದಾಳಿಯಲ್ಲಿ ಮೃತಪಟ್ಟ ಬಾಲಕೃಷ್ಣ ಗೌಡರ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜ ಸಾಂತ್ವನ – ರೂ.20 ಲಕ್ಷ ಪರಿಹಾರಕ್ಕೆ ಕ್ರಮ

ತಾಲೂಕು, ಬೆಳ್ತಂಗಡಿ

ಮುಂಡಾಜೆ : ನಿವೃತ್ತ ಶಿಕ್ಷಕ ಶಂಕರ್ ತಾಮನ್ಕರ್ ರಿಂದ ಮಾದರಿ ಸೇವೆ – ತಂದೆ ದಿ. ನಾರಾಯಣ ತಾಮನ್ಕರ್ ಸವಿನೆನಪಿಗಾಗಿ ಅರ್ಹರಿಗೆ ಧನ ಸಹಾಯ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಭಾರೀ ಮಳೆ ಹಿನ್ನೆಲೆ : ನಾಳೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ತುರ್ತು ಸಭೆ

⚠️ Contents are protected on this website.