ಭಾರತಕ್ಕೆ ವೈಟ್ ವಾಶ್ ಮುಖಭಂಗ – ಗೆದ್ದು ಇತಿಹಾಸ ನಿರ್ಮಿಸಿದ ದಕ್ಷಿಣ ಆಫ್ರಿಕ

ಗುವಾಹಟಿ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 549 ರನ್ ಗಳ ಕಠಿಣ ಗುರಿ ಪಡೆದಿದ್ದ ಭಾರತ ತಂಡ ಅಂತಿಮವಾಗಿ 140 ರನ್ ಗಳಿಸಲಷ್ಟೇ ಶಕ್ತವಾಗಿ, ದಕ್ಷಿಣ ಆಫ್ರಿಕಾಕ್ಕೆ ಶರಣಾಯಿತು. ಭಾರತ ತಂಡದಲ್ಲಿ ಆಲ್ರೌಂಡರ್ ರವೀಂದ್ರ ಜಡೇಜಾ(54) ಅವರನ್ನು ಹೊರತುಪಡಿಸಿದರೆ ಬೇರಾವ ಬ್ಯಾಟರ್ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಂಗಳವಾರ ಸಂಜೆ 2 ವಿಕೆಟ್ ನಷ್ಟಕ್ಕೆ 27 ರನ್ ಗಳಿಸಿದ್ದ ಭಾರತ ತಂಡ ಬುಧವಾರ ಆ ಮೊತ್ತಕ್ಕೆ ಮತ್ತೆ 113 ರನ್ ಪೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಯಾವ ಹಂತದಲ್ಲೂ ಭಾರತ ತಂಡದ ಬ್ಯಾಟರ್ ಗಳು ದಿಟ್ಟತನದ ಬ್ಯಾಟಿಂಗ್ ಪ್ರದರ್ಶನವನ್ನು ಮಾಡಲೇ ಇಲ್ಲ. ಕಡೇ ಪಕ್ಷ ಡ್ರಾ ಮಾಡುವ ಗೋಜಿಗೂ ಹೋಗಲಿಲ್ಲ.

Advertisement

ಭಾರತ ತಂಡದ ಎರಡನೇ ಇನ್ನಿಂಗ್ಸ್ ನಲ್ಲಿ ಜವಾಬ್ದಾರಿಯುತವಾಗಿ ಆಡಬೇಕಿದ್ದ ಆರಂಭಿಕ ಯಶಸ್ವಿ ಜೈಸ್ವಾಲ್(13), ಅನುಭವಿ ಬ್ಯಾಟರ್ ಕೆಎಲ್ ರಾಹುಲ್(13), ಸಾಯಿ ಸುದರ್ಶನ್(14), ಧ್ರುವ ಜ್ಯುರೆಲ್(2), ನಾಯಕ ರಿಷಬ್ ಪಂತ್(13), ವಾಶಿಂಗ್ಟನ್ ಸುಂದರ್(16) ಹೀಗೆ ಯಾರೂ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಲೇ ಇದ್ದರು.

ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಿತ್ತಿದ್ದ ಸ್ಪಿನ್ನರ್ ಸೈಮನ್ ಹಾರ್ಮರ್ ಎರಡನೇ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಕಿತ್ತು ಭಾರತದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಬ್ಬ ಸ್ಪಿನ್ನರ್ ಕೇಶವ್ ಮಹಾರಾಜ್ 2 ವಿಕೆಟ್ ಉರುಳಿಸಿದರು. ಉಳಿದೆರಡು ವಿಕೆಟ್ ಗಳನ್ನು ಮಧ್ಯಮ ವೇಗಿ ಮಾರ್ಕೋ ಯಾನ್ಸನ್ ಮತ್ತು ಸ್ಪಿನ್ನರ್ ಸೇನುರನ್ ಮುತ್ತುಸ್ವಾಮಿ ಹಂಚಿಕೊಂಡರು. ದಕ್ಷಿಣ ಆಫ್ರಿಕಾ ತಂಡ ಬೃಹತ್ ಗುರಿ ನೀಡಿದಾಗಲೇ ಭಾರತ ತಂಡದ ಸೋಲು ಪಕ್ಕಾ ಆಗಿತ್ತು. ಆದರೂ ಕಡೇಪಕ್ಷ ಡ್ರಾ ಗೊಳಿಸಿದ್ದರೂ ವೈಟ್ ವಾಶ್ ನಿಂದ ತಪ್ಪಿಸಿಕೊಳ್ಳಬಹುದಾಗಿತ್ತು. ಅದೂ ಭಾರತ ತಂಡಕ್ಕೆ ಸಾಧ್ಯವಾಗದ್ದು ತೀವ್ರ ಟೀಕೆಗೆ ಗುರಿಯಾಗಿದೆ.

ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 489
ಭಾರತ ಪ್ರಥಮ ಇನ್ನಿಂಗ್ಸ್ 201
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ 260/5 ಡಿಕ್ಲೇರ್

ಭಾರತ ದ್ವಿತೀಯ ಇನ್ನಿಂಗ್ಸ್ 140, ರವೀಂದ್ರ ಜಡೇಜಾ 54, ವಾಶಿಂಗ್ಟನ್ ಸುಂದರ್ 16, ಸೈಮನ್ ಹಾರ್ಮರ್ 37ಕ್ಕೆ 6, ಕೇಶವ್ ಮಹಾರಾಜ್ 37ಕ್ಕೆ 2.

ಇದೀಗ, ಗೌತಮ್ ಗಂಭೀರ್ ವಿರುದ್ಧವೂ ಕ್ರಿಕೆಟ್ ಪ್ರೇಮಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿಯನ್ನು ಮತ್ತೆ ತಂಡಕ್ಕೆ ಕರೆಸಿಕೊಳ್ಳಬೇಕೆನ್ನುವ ಕೂಗು ಕೂಡಾ ಬಲವಾಗಿ ಕೇಳಿ ಬರುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಸ್ ಅಂಕಪಟ್ಟಿಯಲ್ಲಿ ಭಾರತ ತಂಡ ಕುಸಿತ ಕಂಡಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.