ಚಿಕ್ಕಮಗಳೂರು : ಟೈಲರಿಂಗ್ ದಂಪತಿಯ ಪುತ್ರಿ ಬೃಂದಾ ರಾಜ್ಯಕ್ಕೇ ಟಾಪರ್ !

ಚಿಕ್ಕಮಗಳೂರು, ಏ. 23 : ನಗರದ ಸೇಂಟ್ ಮೇರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಬೃಂದಾ ಎಂ. ತಾಪ್ಸೆ 625 ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.

Advertisement

ನಗರದ ಕೋಟೆ ಬಡಾವಣೆಯ ಹರ್ಷಿಣಿ ಮಂಜುನಾಥ್ ದಂಪತಿಯ ಪುತ್ರಿ ಈ ಬೃಂದಾ. ದಂಪತಿಗಳು ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿರುವ ಮಗಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದ್ದು, ಮಗಳು ಬೃಂದಾ ಎಂ. ತಾಪ್ಸೆ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ತರಗತಿ ಬಳಿಕ ಸಂಜೆ 6 ಗಂಟೆಯವರೆಗೂ ಕೋಚಿಂಗ್ ಗೆ ತೆರಳುತ್ತಿದ್ದೆ. ಸಂಜೆ 7.30 ರಿಂದ 12 ಗಂಟೆಯವರೆಗೆ ಹಾಗೂ ಬೆಳಗ್ಗೆ 4:30 ರಿಂದ ನಿರಂತರ ಓದುತ್ತಿದ್ದೆ. ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಮುಂದೆ ಇಂಜಿನಿಯರಿಂಗ್ ಮಾಡುವ ಆಕಾಂಕ್ಷೆಯನ್ನು ಹೊಂದಿದ್ದೇನೆ. 625ಕ್ಕೆ 625 ಅಂಕ ಬರುವ ನಿರೀಕ್ಷೆ ಹೊಂದಿದ್ದೆ, ಅದು ಸಕಾರಗೊಂಡಿದ್ದಕ್ಕೆ ಸಂತೋಷವಾಗಿದೆ, ಪೋಷಕರು ಶಾಲಾ ಆಡಳಿತ ಮಂಡಳಿ ಉಪನ್ಯಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎನ್ನುತ್ತಾರೆ ಬೃಂದಾ.

ಇದನ್ನೂ ಓದಿ :

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.