ಬೆಳ್ತಂಗಡಿ : ತಾಲೂಕಿನ ಪರಿಶಿಷ್ಟ ಜಾತಿ ಕಾಲೊನಿಯ ರಸ್ತೆ ಅಭಿವೃದ್ಧಿಗೆ ಅನುದಾನ : ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ, ಮಾ 24 : ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಶಾಸಕ ಶ್ರೀ ಹರೀಶ್ ಪೂಂಜ ತಿಳಿಸಿದ್ದಾರೆ.

Advertisement

ಈ ಅನುದಾನದಡಿಯಲ್ಲಿ ಕುಕ್ಕಳ ಗ್ರಾಮದ ಹಟ್ಟತ್ತೋಡಿಯಿಂದ ಕೆಂಪರಿಗೆಯವರೆಗೆ ರಸ್ತೆ– 25.00 ಲ.ರೂ., ಮಾಲಾಡಿ ಗ್ರಾಮದ ಪುರಿಯದಿಂದ ಕುರಿಯೋಡಿ ವರೆಗೆ ರಸ್ತೆ– 25.00 ಲ.ರೂ., ವೇಣೂರು ಗ್ರಾಮದ ಮೂಡ್ಲಾ ಕ್ರಾಸ್‌ನಿಂದ ನತ್ಯಟ್ಟವರೆಗೆ ರಸ್ತೆ – 25.00 ಲ.ರೂ., ನಾರಾವಿ ಗ್ರಾಮದ ದುಗಲಾಯಿ ಗುಡ್ಡೆ ರಸ್ತೆ – 25.00 ಲ. ರೂ., ಕಳೆಂಜ ಗ್ರಾಮದ ಬಂಡೇರಿಯಿಂದ ಬೇಂಗದಗಂಡಿವರೆಗೆ ರಸ್ತೆ – 25.00 ಲ.ರೂ., ನ್ಯಾಯತರ್ಪು ಗ್ರಾಮದ ಗೋವಿಂದೂರು ರಿಂದ ಕಣಿಯೂರು ಗ್ರಾಮದ ಕಾಪಿನಡ್ಕ -ಪೆರ್ದಡ್ಕ ರಸ್ತೆ – 50.00 ಲ. ರೂ., ಪಟ್ರಮೆ ಗ್ರಾಮದ ಮಣಿಯೇರು ರಸ್ತೆ – 15.00 ಲ. ರೂ., ಪಟ್ರಮೆ ಗ್ರಾಮದ ಓಟಕಜೆ ರಸ್ತೆ – 10.00 ಲ. ರೂ. ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡಿದೆ.

ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಸಮುದಾಯದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಲಭ್ಯವಾಗಲಿದ್ದು, ದೈನಂದಿನ ಸಂಚಾರ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಗಳಿಗೆ ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಶಾಸಕ ಶ್ರೀ ಹರೀಶ್ ಪೂಂಜ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.