ಲಾಯಿಲ : ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ರಂಗಮಂದಿರ ನಿರ್ಮಾಣಕ್ಕೆ ಶಶಿಧರ ಶೆಟ್ಟಿ ಬರೋಡಾ, ನವಶಕ್ತಿ ಗುರುವಾಯನಕೆರೆ 5 ಲಕ್ಷ ರೂ. ಸಹಾಯಧನ

Advertisement

ಲಾಯಿಲ : ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬದ ಪ್ರಯುಕ್ತ ರಂಗಮಂದಿರ ನಿರ್ಮಾಣಕ್ಕೆ ಕಾಶಿ ಶೆಟ್ಟಿ ಅವರ ಸ್ಮರಣಾರ್ಥವಾಗಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಹಾಗೂ ನವಶಕ್ತಿ ಗುರುವಾಯನಕೆರೆ ವತಿಯಿಂದ 5 ಲಕ್ಷ ಸಹಾಯಧನ ನೀಡಿ, ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಸುಂದರವಾದ ರಂಗಮಂದಿರ ನಿರ್ಮಾಣಕ್ಕೆ ಶಾಲಾಡಳಿತ ಮಂಡಳಿ ಕನಸು ಕಂಡಿದ್ದು, ಇದೀಗ ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಹಾಗೂ ನವಶಕ್ತಿ ಗುರುವಾಯನಕೆರೆ ಅವರ ಮೂಲಕ ನನಸಾಗುತ್ತಿದೆ. ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಹಾಗೂ ನವಶಕ್ತಿ ಗುರುವಾಯನಕೆರೆ ಇವರಿಗೆ ಶಾಲಾಡಳಿತ ಮಂಡಳಿ, ಸಮಸ್ತ ವಿದ್ಯಾರ್ಥಿ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಶಶಿಧರ್ ಶೆಟ್ಟಿ ಅವರು ಸಹಾಯಧನವನ್ನು ಶಾಲಾ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಸಿಸ್ಟರ್ ಪ್ರೀತಿ ಜಾರ್ಜ್, ಸಿಸ್ಟರ್ ಮೇಲ್ವಿನ್, ಅಜಿತ್ ಮಾಸ್ಟರ್ ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ರೆಜಿ ಜಾರ್ಜ್ಉಪಸ್ಥಿತರಿದ್ದರು.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ