ಟೆಹ್ರಾನ್ : ಲಂಕಾ ಕರಾವಳಿ ಪ್ರದೇಶದಲ್ಲಿ ಇರಾನ್ ಹಡಗಿನ ಮೇಲೆ ದಾಳಿ – ಕನಿಷ್ಠ 100 ಮಂದಿ ಕಾಣೆ !

Advertisement

ಟೆಹ್ರಾನ್ : ಶ್ರೀಲಂಕಾ ಕರಾವಳಿ ಪ್ರದೇಶದಲ್ಲಿ ಇರಾನ್ ಹಡಗಿನ ಮೇಲೆ ಸಬ್ ಮರೈನ್ ದಾಳಿ ನಡೆಸಿದ್ದ ಪರಿಣಾಮ ಕನಿಷ್ಠ 100 ಜನರು ಕಾಣೆಯಾಗಿದ್ದು, 78 ಮಂದಿ ಗಾಯಗೊಂಡಿರುವುದಾಗಿ ಶ್ರೀಲಂಕಾ ನೌಕಾ ಮತ್ತು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

Advertisement

ಇಸ್ರೇಲ್, ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿದ್ದು, ಬುಧವಾರ(ಮಾ.04)ಕ್ಕೆ ಐದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇರಾನ್ ಬಹ್ಮನ್ ಮೇಲೆ ನಡೆಸಿದ ಡೋನ್ ದಾಳಿಯಲ್ಲಿ ಹಲವು ಕಟ್ಟಡಗಳು ಹಾನಿಗೊಂಡಿರುವುದಾಗಿ ವರದಿ ತಿಳಿಸಿದೆ. ಆದರೆ ಇರಾನ್ ನ 74 ಮಿಸೈಲ್ಸ್ ಗಳನ್ನು ಹಾಗೂ 95 ಡೋನ್ಸ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಬಹ್ಮನ್ ಮಿಲಿಟರಿ ತಿಳಿಸಿದೆ. ಅಲ್ಲದೇ ಬಹ್ಮನ್ ನಾಗರಿಕರು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸಲಹೆ ನೀಡಿದ್ದು, ಕ್ಷಿಪಣಿ ದಾಳಿಗೊಳಗಾದ ಕಟ್ಟಡ, ಪ್ರದೇಶಗಳ ವಿಡಿಯೋ ಚಿತ್ರೀಕರಣಕ್ಕೆ ಜನರು ತೆರಳದಂತೆ ಸೂಚನೆ ನೀಡಿದೆ.

Advertisement

ಯುದ್ಧ ಇನ್ನಷ್ಟು ತೀವ್ರಗೊಂಡಿರುವ ನಡುವೆ ಇರಾನ್ ನ ಎಫ್ 35 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಯುದ್ಧಾರಂಭ ನಂತರ ಮೊದಲ ಬಾರಿಗೆ ಮಾನವ ಚಾಲಿತ ಎಫ್ 35 ಯುದ್ಧ ವಿಮಾನವನ್ನು ಧ್ವಂಸಗೊಳಿಸಿರುವುದಾಗಿ ಇಸ್ರೇಲ್ ಸೇನಾ ಪಡೆ ತಿಳಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ