ಬೆಳ್ತಂಗಡಿ, ಏ. 20 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ 2026-27ನೇ ಸಾಲಿನ ಕೋಶಾಧಿಕಾರಿಯಾಗಿ ಶ್ರೀ ಸುದೀಪ್ ಸಾಲ್ಯಾನ್ ಸವಣಾಲು ನಿಯೋಜನೆಗೊಂಡಿದ್ದಾರೆ.
ಶ್ರೀ ಸುದೀಪ್ ಸಾಲ್ಯಾನ್ ಸವಣಾಲು ಇವರು ಧ್ವನಿ ನ್ಯೂಸ್ ಸಂಸ್ಥೆಯ ಸಂಸ್ಥಾಪಕರಾಗಿ ಮಾದ್ಯಮ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಜೆಸಿಐ ಬೆಳ್ತಂಗಡಿ (ರಿ.), ಲಯನ್ಸ್ ಕ್ಲಬ್ ಬೆಳ್ತಂಗಡಿ (ರಿ.), ಯಂಗ್ ಬಾಯ್ಸ್ ಸವಣಾಲು ಇದರ ಅಧ್ಯಕ್ಷರಾಗಿಯೂ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


