ಬೆಳ್ತಂಗಡಿ, ಆ. 23 : ಎಸ್ ಯಾಂಡ್ ವಿ ಫ್ಯಾಮಿಲಿ ಬ್ಯೂಟಿ ಸಲೂನ್ ಮತ್ತು ಅಕಾಡೆಮಿಯು ಸಂತೆಕಟ್ಟೆಯ ಸುವರ್ಣ ಆರ್ಕೆಡ್ ನಲ್ಲಿ ಇಂದು ಲೋಕಾರ್ಪಣೆಗೊಂಡಿತು.

ಶಾಂತಾ ವಿ ಬಂಗೇರ ಹಾಗೂ ಶಾಶ್ವಿತ್ ಬಂಗೇರ ಅವರ ಮಾಲಕತ್ವದ ಎಸ್ ಯಾಂಡ್ ವಿ ಫ್ಯಾಮಿಲಿ ಬ್ಯೂಟಿ ಸಲೂನ್ ಮತ್ತು ಅಕಾಡೆಮಿಯನ್ನು ಶಾಸಕ ಹರೀಶ್ ಪೂಂಜಾ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಇಂದು ಸೌಂದರ್ಯ ಎನ್ನುವಂತದ್ದು ಮನುಷ್ಯನ ಬಹಳ ನೆಚ್ಚಿನ ನಡೆಯಾಗಿದೆ. ಆದರೆ, ಒಂದು ಉತ್ತಮ ಬ್ಯೂಟಿ ಪಾರ್ಲರ್ ಗಾಗಿ ಅಥವಾ ಸಲೂನ್ ಗಾಗಿ ಮಂಗಳೂರಿಗೆ ಹರಸಿ ಹೋಗಬೇಕಿತ್ತು. ಇಂದು ಶಾಂತ ಬಂಗೇರ ಅವರು, ಬೆಳ್ತಂಗಡಿಯ ಕೊರತೆಯನ್ನು ನೀಗಿಸಿದ್ದಾರೆ. ಇನ್ನು ಇಲ್ಲಿನ ಯುವಕ ಯುವತಿಯರು ಮಂಗಳೂರಿಗೆ ತೆರಳಬೇಕಿಲ್ಲ, ಎಸ್ ಎಂಡ್ ವಿ ಬ್ಯೂಟಿ ಸಲೂನ್ ಗೆ ಭೇಟಿ ನೀಡಿ ತಮ್ಮಿಷ್ಟದಂತೆ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು. ಅದೇ ರೀತಿಯಲ್ಲಿ ಎಸ್ ಎಂಡ್ ವಿ ಬ್ಯೂಟಿ ಪಾರ್ಲರ್ ಮಾತ್ರವಲ್ಲದೆ ಅಕಾಡೆಮಿ ಮೂಲಕವೂ ಯುವಕ ಯುವತಿಯರಿಗೆ ತರಭೇತಿ ನೀಡುತ್ತಿರುವುದು ಸಂತಸ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಬೆಳ್ತಂಗಡಿ ಜನತೆಯ ಸೌಂದರ್ಯವನ್ನು ಹೆಚ್ಚಿಸಲು ಶಾಂತಾ ಬಂಗೇರ ಅವರು ಎಸ್ ಎಂಡ್ ವಿ ಬ್ಯೂಟಿ ಸಲೂನ್ ಮೂಲಕ ಮುಂದಡಿಯಿಟ್ಟಿದ್ದಾರೆ. ಅವರ ಸಂಸ್ಥೆಯು ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ, ಶಾಂತ ಬಂಗೇರಾ ಅವರ ಗುರುಗಳಾದ ಶ್ರೀಮತಿ ಪಲ್ಲವಿರಾಜು, ಶ್ರೀಮತಿ ಲಲಿತಾ ಕುಲಾಲ್, ಶ್ರೀಮತಿ ವಿಶಾಲ ಮೋಹನ್, ಶ್ರೀಮತಿ ಶಾಲಿಮಾ ಮೊನಾಲಿಸಾ, ಶ್ರೀಮತಿ ಲಕ್ಷ್ಮೀ ಎನ್ ಆರ್., ಶ್ರೀಮತಿ ದೀಕ್ಷಿತಾ ನಿತೇಶ್, ಶ್ರೀಮತಿ ರಮ್ಯಾ ದುಬೈ ಸೇರಿದಂತೆ ಬ್ಯೂಟಿ ಪಾರ್ಲರ್ ಕ್ಷೇತ್ರದ ಹಲವು ಸಾಧಕರನ್ನು ಶ್ರೀಮತಿ ಶಾಂತ ಬಂಗೇರಾ ಹಾಗೂ ಶ್ರೀ ಶಾಶ್ವತ್ ಬಂಗೇರಾ ಅವರು ಸನ್ಮಾನಿಸಿ ಗೌರವಿಸಿದರು.

ವೇದಿಕೆಯಲ್ಲಿ ಶ್ರೀಮತಿ ಭವಾನಿ ಶ್ರೀಧರ್, CEO OF DHIKSHA’S ACADEMY BANGALORE, LLC ಬೆಳ್ತಂಗಡಿ ಅಭಿವೃದ್ಧಿ ಅಧಿಕಾರಿ ಶ್ರೀ ಟಿ.ಡಿ ರಾಘವೇಂದ್ರ, ನಿವೃತ್ತ ಸೂಪರಿಟೆಂಡೆಂಟ್ ಆಫ್ ಪೋಲಿಸ್ ಶ್ರೀ ಪಿತಾಂಬರ ಹೇರಾಜೆ, ಪ್ರಣೀತ್ ಎಂಟರ್‌ಪ್ರೈಸಸ್ ಮಾಲಕರಾದ ಶ್ರೀ ನಿಖಿಲ್ ಪಿ. ಬಂಗೇರ, ಸುವರ್ಣ ಆರ್ಕೇಡ್ ಬೆಳ್ತಂಗಡಿ ಇದರ ಮಾಲಕರಾದ ಶ್ರೀ ನಾಣ್ಯಪ್ಪ ಪೂಜಾರಿ, ಶ್ರೀ ಚಿದಾನಂದ ಇಡ್ಯ, ಪ್ರತೀಕ್ಷಾ ಫ್ಯಾನ್ಸಿ ಬೆಳ್ತಂಗಡಿ, ಶ್ರೀ ಪ್ರಸಾದ್ ಬಿ.ಎಸ್ ರಮ್ಯಾ ಫ್ಯಾನ್ಸಿ ಉಜಿರೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು, ಶುಭ ಹಾರೈಸಿದರು.
