ಬಂಟ್ವಾಳ : ಕಾರಣಿಕ ಕ್ಷೇತ್ರ ಮಿತ್ತಮಜಲಿನ ದೈವಂಗಳಿಗೆ ಸ್ವರ್ಣ ಬಿಂಬ ನಿರ್ಮಾಣ

Advertisement

ಸಜೀಪ, ಜ. 19 : ಮಿತ್ತಮಜಲು ಶ್ರೀ ನಡಿ ಏಳು ದೈವಂಗಳು ಶ್ರೀ ಉಳ್ಳಾಲ್ತಿ ಶ್ರೀ ನಾಲ್ಕೈಥಾಯ ಹಾಗೂ ಪರಿವಾರ ದೈವಗಳ ಕ್ಷೇತ್ರ ಇತಿಹಾಸವುಳ್ಳ ಕಾರಣಿಕ ಕ್ಷೇತ್ರವಾಗಿದೆ. ಈ ದೈವಸ್ಥಾನದಲ್ಲಿ ಶ್ರೀ ಅಣ್ಣ ತಮ್ಮ ದೈವಂಗಳಿಗೆ ಸ್ವರ್ಣ ಬಿಂಬ ನಿರ್ಮಾಣ ನಡೆದಿದ್ದು,ಅದನ್ನು ಸಮರ್ಪಿಸುವ ಪೂಜಾ ಕಾರ್ಯಕ್ರಮ ನೆರವೇರಿತು.

Advertisement

ತನ್ನೆಲ್ಲಾ ಇಷ್ಟಾರ್ಥಗಳನ್ನ ಈಡೇರಿಸುವ ಪುಣ್ಯದ ಮಣ್ಣು ಎಂಬುದು ಭಕ್ತರ ಅಚಲ ನಂಬಿಕೆಯಾಗಿದೆ. ಶ್ರೀ ನಡಿ ಏಳು ದೈವಂಗಳು ಶ್ರೀ ಉಳ್ಳಾಲ್ತಿ ಶ್ರೀ ನಾಲ್ಕೈಥಾಯ ಹಾಗೂ ಪರಿವಾರ ದೈವ ಗಳ ಕ್ಷೇತ್ರ ಮಿತ್ತಮಜಲು ಸಜೀಪ ಮೂಡ ಶ್ರೀ ಕ್ಷೇತ್ರದಲ್ಲಿ ದೈವಂಗಳ ನೂತನ ಸ್ವರ್ಣ ಬಿಂಬ ನಿರ್ಮಾಣದ ಅಂಗವಾಗಿ ಅನುಜ್ಞಾಕಲಶ ಪ್ರಾರ್ಥನೆ ಸಂಕಲ್ಪ ಬ್ರಹ್ಮಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಿತು.

Advertisement

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಪಾಲೆ ಮಂಟಪ ಸಂಸಾರದ ಪ್ರಧಾನರಾದ ಕಾಂತಾಡಿಗುತ್ತು ಗಣೇಶ್ ನಾಯಕ್ ಯಾನೆ ಉಗ್ಗಶೆಟ್ಟಿ, ಬಿಜಂದಾರ್ ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿಪ್ರದಾನ ರಾಧ ಮುತ್ತಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ, ಮಾಡದಾರು ಗುತ್ತು ಯಶೋಧರ ರೈ, ನಗ್ರೀಗುತ್ತು ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಜೀವನ್ ಆಳ್ವ, ಶ್ರೀ ದೇವಿಪ್ರಸಾದ್ ಪೂಂಜ ಮೊದಲಾದ ಗುತ್ತುಮನೆತನದವರು ಹಾಗೂ ಜೀರ್ಣೋದ್ಧಾರ ಸಮಿತಿಯವರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ