ಮಂಗಳೂರು : ಸಕಾಲಿಕ ಮಳೆ, ಲೋಕ ಕಲ್ಯಾಣಕ್ಕಾಗಿ ದೇವರ ಮೊರೆ ಹೋದ “ಟೀಂ ಪಿಲಿ ಅಜನೆ ಮಂಗಳೂರು” ತಂಡ

Advertisement

ಮಂಗಳೂರು, ಜು. 17 : ನಾಡಿನೆಲ್ಲೆಡೆ ಸಕಾಲಿಕ ಮಳೆ-ಬೆಳೆ ಹಾಗೂ ಜಗತ್ತಿನಲ್ಲಿ ಎದುರಾಗಿರುವ ಯುದ್ಧದ ವಾತಾವರಣ ಕೊನೆಗೊಂಡು ಶಾಂತಿ-ನೆಮ್ಮದಿ ನೆಲೆಸಲಿ ಎಂದು ಟೀಂ ಪಿಲಿ ಅಜನೆ ಮಂಗಳೂರು ತಂಡದಿಂದ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನದಲ್ಲಿ ಸಾಮೂಹಿಕ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

Advertisement

ಮಂಗಳೂರು ದಸರಾ ಸಂದರ್ಭದಲ್ಲಿ, ಹುಲಿ ಕುಣಿತದ ಮೂಲಕ ತುಳುನಾಡಿನ ಸಂಸ್ಕೃತಿಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಈ ತಂಡವು, ಇದೀಗ ಲೋಕ ಕಲ್ಯಾಣಾರ್ಥವಾಗಿ ಕುದ್ರೋಳಿ ಶ್ರೀ ಭಗವತಿ ದೇವಸ್ಥಾನ,ಅಮ್ಮನವರ ಮೊರೆ ಹೋಗಿದ್ದಾರೆ. ಈ ಬಾರಿ ಮಳೆರಾಯ ಕೈ ಕೊಟ್ಟಿದ್ದು, ನಾಡಿನ ಕೆಲವೆಡೆ ಮಳೆಗಾಲದಲ್ಲೂ ನೀರಿಗಾಗಿ ಪರಿತಪಿಸುವ ಸನ್ನಿವೇಶ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಸಕಾಲಿಕ ಮಳೆ-ಬೆಳೆಗಾಗಿ ಮತ್ತು ಜಗತ್ತಿನಲ್ಲಿ ಯುದ್ಧದ ವಾತಾವರಣ ಕೊನೆಗೊಂಡು ಶಾಂತಿ, ನೆಮ್ಮದಿ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ, ಟೀಂ ಪಿಲಿ ಅಜನೆ ಮಂಗಳೂರು ತಂಡದ ಮುಂದಾಳು ಶ್ರೀ ಪ್ರಮೋದ್ ಕರ್ಕೇರಾ, ಮುಖ್ಯ ಸಲಹೆಗಾರರಾದ ರಮೇಶ್ ಕೆ., ಶಕ್ತಿ ಎಜುಕೇಶನ್ ಟ್ರಸ್ಟ್ ಮಂಗಳೂರು, ಶ್ರೀಮತಿ ಸಪ್ನಾ ಮೋಹನ್ ಅಮೀನ್, ಕುಮಾರಿ ಸುಷ್ಮಾ, ಕುಮಾರಿ ಹರ್ಷಿತಾ, ಪ್ರದೀಪ್, ಅಭಿಷೇಕ್, ಹರ್ಷಿತ್, ಕಾರ್ತಿಕ್, ರಂಜಿತ್ ಹಾಗೂ ಅನೇಕ ಭಕ್ತಾಧಿಮಾನಿಗಳು ಈ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ