ಹೊಸದಿಲ್ಲಿ : ಪ್ರಸಾದದಲ್ಲಿ “ರಿಸಿನ್” ಎಂಬ ವಿಷ ಬೆರೆಸಿ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ ಉಗ್ರ ಸೆರೆ : ತಪ್ಪಿದ ಭಾರಿ ಅನಾಹುತ

ಹೊಸದಿಲ್ಲಿ: ದೇಶಾದ್ಯಂತ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಐಸಿಸ್ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಹೊರಬಿದ್ದಿದೆ. ಬಂಧಿತರಲ್ಲಿ ಒಬ್ಬನಾದ ವೈದ್ಯ, ತನ್ನ ವೈದ್ಯಕೀಯ ಜ್ಞಾನವನ್ನು ಬಳಸಿಕೊಂಡು ಜಗತ್ತಿನ ಅತ್ಯಂತ ಮಾರಣಾಂತಿಕ ವಿಷಗಳಲ್ಲಿ ಒಂದಾದ ‘ರಿಸಿನ್‌’ ಅನ್ನು ತಯಾರಿಕೆಯಲ್ಲಿ ತೊಡಗಿದ್ದ. ಈ ಮಾರಣಾಂತಿಕ ವಿಷವನ್ನು ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿದ್ದ ಎಂಬ ಗಂಭೀರ ವಿಚಾರ ಬಯಲಾಗಿದೆ.

Advertisement

ಚೀನಾದಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್, ತನ್ನ ವೈದ್ಯಕೀಯ ಜ್ಞಾನವನ್ನು ಬಳಸಿ ಹರಳೆಣ್ಣೆ ಬೀಜಗಳಿಂದ ‘ರಿಸಿನ್’ ಎಂಬ ಮಾರಣಾಂತಿಕ ವಿಷವನ್ನು ದೀರ್ಘಕಾಲದಿಂದ ತಯಾರಿಸುತ್ತಿದ್ದ. ಈ ವಿಷದ ವಿಶೇಷತೆ ಏನೆಂದರೆ, ಇದಕ್ಕೆ ಯಾವುದೇ ರುಚಿ ಅಥವಾ ವಾಸನೆ ಇರುವುದಿಲ್ಲ. ಆದ್ದರಿಂದ, ಇದನ್ನು ಆಹಾರ ಅಥವಾ ನೀರಿನಲ್ಲಿ ಬೆರೆಸಿದರೂ ಪತ್ತೆ ಹಚ್ಚುವುದು ಭಾರೀ ಕಷ್ಟ. ಬಹುತೇಕ ಅಸಾಧ್ಯ ಎಂದೇ ಹೇಳಬಹುದು. ಇದೇ ಗುಣವನ್ನು ಬಳಸಿಕೊಂಡು ದಿಲ್ಲಿ, ಅಹಮದಾಬಾದ್ ಮತ್ತು ಲಖನೌ ನಗರಗಳಲ್ಲಿನ ನೀರು ಸರಬರಾಜು ವ್ಯವಸ್ಥೆ ಮತ್ತು ದೇವಸ್ಥಾನಗಳಲ್ಲಿ ವಿತರಿಸುವ ಪ್ರಸಾದದಲ್ಲಿ ವಿಷ ಬೆರೆಸಿ ಸಾಮೂಹಿಕ ಹತ್ಯೆ ನಡೆಸಲು ಈತ ಯೋಜಿಸಿದ್ದ. ಇದಕ್ಕಾಗಿ ಒಂದಿಷ್ಟು ಸ್ಥಳಗಳನ್ನು ಗುರುತಿಸಿ, ಅವುಗಳ ಮೇಲೆ ನಿರಂತರ ನಿಗಾವನ್ನೂ ಇರಿಸಿದ್ದೆನ್ನಲಾಗಿದೆ. ಈ ಮೂಲಕ ದೇಶದಲ್ಲಿ ಸಾಮೂಹಿಕ ಹತ್ಯೆ ನಡೆಸಲು ಮುಂದಾಗಿದ್ದ ಎನ್ನುವ ವಿಚಾರ ಇದೀಗ ಬಯಲಾಗಿದೆ.

ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌)ನಿಂದ ಬಂಧಿತರಾದ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್, ಮೊಹಮ್ಮದ್ ಸುಹೇಲ್ ಮತ್ತು ಆಜಾದ್, ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಐಸಿಸ್ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಇದಲ್ಲದೆ, ಇವರಿಗೆ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಡ್ರೋನ್‌ಗಳ ಮೂಲಕ ಗಡಿಯಲ್ಲಿ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದರು ಎಂಬ ಆಘಾತಕಾರಿ ವಿಷಯವೂ ತನಿಖೆ ವೇಳೆ ಬಹಿರಂಗವಾಗಿದೆ. ಭಯೋತ್ಪಾದನಾ ನಿಗ್ರಹ ದಳಗಳ ಸಮಯೋಚಿತ ಕಾರ್ಯಾಚರಣೆಯಿಂದಾಗಿ ಈ ಮೂವರು ಉಗ್ರರು ಹೆಣೆದಿದ್ದ ಭಾರೀ ಸಂಚು ವಿಫಲಗೊಂಡಿದೆ. ಸದ್ದಿಲ್ಲದೆ ನಡೆಯುವ ಇಂತಹ ಕಾರ್ಯಾಚರಣೆಗಳು, ದೇಶದಲ್ಲಿ ಸಂಭವಿಸಬಹುದಾದ ಅದೆಷ್ಟೋ ಭಯೋತ್ಪಾದಕ ಕೃತ್ಯಗಳನ್ನು ತಡೆಯುತ್ತವೆ. ಕಳೆದ ದಶಕದಲ್ಲಿ ನಾಗರಿಕ ಪ್ರದೇಶಗಳಲ್ಲಿ ಶಾಂತಿ ನೆಲೆಸಲು, ಅನಾಹುತಗಳನ್ನು ತಡೆಯಲು ಭದ್ರತಾ ಏಜೆನ್ಸಿಗಳ ಅವಿರತವಾಗಿ ಶ್ರಮಿಸುತ್ತಲೇ ಇವೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಪ್ರಧಾನಿಯವರ ಪೋಸ್ಟ್‌ಗೆ ನಿರ್ಬಂಧ ವಿವಾದ – ಫೇಸ್‌ಬುಕ್ ವಿರುದ್ಧ ಬಿಜೆಪಿ ಆಕ್ರೋಶ !

⚠️ Contents are protected on this website.