ತುಳುನಾಡ ಮಣ್ಣಿನ ಮಗಳು ಇಂದು ದೇಶದ ಶ್ರೀಮಂತ ಮಹಿಳಾ ಉದ್ಯಮಿ ….!

Advertisement

ಮಂಗಳೂರು : ದೇಶದ ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮಂಗಳೂರಿನ ಜಯಶ್ರೀ ಉಳ್ಳಾಲ್ ಅಗ್ರಸ್ಥಾನಕ್ಕೇರಿ ಸಾಧನೆ ಮಾಡಿದ್ದಾರೆ. ಹುರುನ್ ರಿಸರ್ಚ್ ಪ್ರಕಟಿಸಿದ ಇಂಡಿಯಾ ರಿಚ್ ಲಿಸ್ಟ್ 2025 ಪ್ರಕಾರ, ದೇಶದ Top-10 ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮಂಗಳೂರಿನಲ್ಲಿ ಜನಿಸಿದ ಟೆಕ್‌ ಲೀಡರ್ ಜಯಶ್ರೀ ಉಳ್ಳಾಲ್ ಮೊದಲ ಸ್ಥಾನ ಪಡೆದು ತುಳುನಾಡಿಗೆ ಹೆಮ್ಮೆ ತಂದಿದ್ದಾರೆ.

Advertisement

ಜಯಶ್ರೀ ಉಳ್ಳಾಲ್ ಅವರು ಹೊಂದಿರುವ ಒಟ್ಟು ಸಂಪತ್ತು ₹50,070 ಕೋಟಿಯಾಗಿದೆ. ಐದು ವರ್ಷಗಳ ಹಿಂದೆ ಸಾರ್ವಜನಿಕವಾಗಿ ಷೇರು ಮಾರುಕಟ್ಟೆಗೆ ಬಂದ ಕ್ಲೌಡ್ ಕಂಪ್ಯೂಟಿಂಗ್ ಸಂಸ್ಥೆ ‘ಅರಿಸ್ಟಾ’ಯ ನಿರ್ದೇಶಕ ಮಂಡಳಿಯಲ್ಲಿ ಇದ್ದು, ಸುಮಾರು 3% ಶೇರುಗಳನ್ನು ಅವರು ಹೊಂದಿದ್ದಾರೆ. ಅವರ ಶೇರುಗಳ ಒಂದು ಭಾಗವನ್ನು ಇಬ್ಬರು ಮಕ್ಕಳು, ಸೊಸೆ ಮತ್ತು ಸೋದರಲಿಯರಿಗೆ ಮೀಸಲಿಡಲಾಗಿದೆ. ಅವರು ಸಿಸ್ಕೋ ಸಿಸ್ಟಮ್ಸ್, ಅಡ್ವಾನ್ಸ್ ಮೈಕ್ರೋ ಡಿವೈಸಸ್ (AMD) ಹಾಗೂ ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಜಯಶ್ರೀ ಉಳ್ಳಾಲ್ ಅವರು ಗೌಡ ಸಾರಸ್ವತ ಬ್ರಾಹ್ಮಣಗಳ ಸ್ಮಾರ್ತ ಸಂಪ್ರದಾಯ ಅನುಸರಿಸುವ ಮಂಗಳೂರಿನ ಚಿತ್ರಪುರ ಸರಸ್ವತ ಬ್ರಾಹ್ಮಣ ಸಮುದಾಯದ ಪ್ರತಿಷ್ಠಿತ ಕುಟುಂಬದವರು. ಭಾರತೀಯ ಮಹಿಳೆಯರ ಶಕ್ತಿಯನ್ನು ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಮೆರಗುಗೊಳಿಸಿದ ಜಯಶ್ರೀ ಉಳ್ಳಾಲ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ