ಮಂಗಳೂರು : ದ್ವಿಚಕ್ರ ವಾಹನ ನಿಯಮ ಉಲ್ಲಂಘನೆ ಹೆಚ್ಚಳ – 4 ತಿಂಗಳಲ್ಲಿ 15,710 ಪ್ರಕರಣ, 71ಲಕ್ಷ ರೂ. ದಂಡ ಸಂಗ್ರಹ !

ಮಂಗಳೂರು, ಮೇ. 08 : ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರು ಮೋಟಾರು ಕಾಯಿದೆ ಉಲ್ಲಂಘಿಸಿ ಸವಾರಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ಸಂಚಾರಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕಾರ್ಯಚರಣೆಯ ಭಾಗವಾಗಿ ಕೇವಲ 4 ತಿಂಗಳಲ್ಲಿ 15,710 ಕೇಸುಗಳು ದಾಖಲಾಗಿದ್ದು, 71,55,500ರೂ. ದಂಡ ಸಂಗ್ರಹವಾಗಿದೆ.

Advertisement

ಅಪಘಾತಗಳ ಸರಣಿ ಮುಂದುವರಿದಿದ್ದು, ಸಾವು-ನೋವು ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಕೆಲವರು ಪಾದಚಾರಿಗಳಾಗಿದ್ದರೆ, ಕೆಲವರು ಯಾರದೋ ತಪ್ಪಿಗೆ ಜೀವತೆತ್ತಿದ್ದಾರೆ. ಅರೆಕ್ಷಣದ ಧಾವಂತಗಳು ಅದೆಷ್ಟೋ ಕುಟುಂಬಗಳನ್ನು ಕಣ್ಣೀರಲ್ಲಿ ತೊಯ್ದಿವೆ. ಮೋಟಾರು ಕಾಯಿದೆ ಉಲ್ಲಂಘನೆಯೇ ಈ ಅಪಘಾತಗಳಿಗೆ ಕಾರಣವಾಗುತ್ತಿದೆ. ನಾಲ್ಕು ರಾಷ್ಟ್ರೀಯ ಹೆದ್ದಾರಿ(ಎನ್‌ಎಚ್‌ 75, 73, 66, 169)ಗಳು ಹಾದು ಹೋಗುತ್ತಿದೆ. ಹೆದ್ದಾರಿಗಳು ಅಭಿವೃದ್ಧಿಯಾಗಿದ್ದು, ವಾಹನ ಸವಾರರು(ವಿಶೇಷವಾಗಿ ದ್ವಿಚಕ್ರ ವಾಹನ) ಅತಿಯಾದ ವೇಗದಲ್ಲಿ ಚಲಿಸುವುದೇ ದುರಂತಕ್ಕೆ ಪ್ರಮುಖ ಕಾರಣವಾಗಿದೆ.

4 ತಿಂಗಳಲ್ಲಿ ದಾಖಲಾದ ದ್ವಿಚಕ್ರ ನಿಯಮ ಉಲ್ಲಂಘನೆ ಪ್ರಕರಣಗಳ ವಿವರ


ಹೆಲ್ಮೆಟ್‌ ರಹಿತ ಚಾಲನೆಗೆ ಸಂಬಂಧಿಸಿ 4 ತಿಂಗಳಲ್ಲಿ 3479 ಪ್ರಕರಣ ದಾಖಲಾಗಿದ್ದು, 17,09,800ರೂ. ದಂಡ, ಹೆಲ್ಮೆಟ್‌ ರಹಿತ ತ್ರಿಬಲ್‌ ರೈಡ್‌ 4365 ಪ್ರಕರಣ ದಾಖಲಾಗಿದ್ದು, 1,16,10,900ರೂ. ದಂಡ, ಅತೀವೇಗದ ಚಾಲನೆ 17 ಪ್ರಕರಣ 17 ಸಾವಿರ ರೂ. ದಂಡ, ನಿರ್ಲಕ್ಷ್ಯದ ಚಾಲನೆ 313 ಪ್ರಕರಣ 3,11,200ರೂ., ತ್ರಿಬಲ್‌ ರೈಡಿಂಗ್‌ 429 ಪ್ರಕರಣ 2,15,200 ರೂ. ದಂಡ, ಕೆಟ್ಟು ಹೋದ ಸೈಲೆನ್ಸರ್‌ 46 ಪ್ರಕರಣ 27,500ರೂ. ದಂಡ, ಪಾನಮತ್ತನಾಗಿ ಚಾಲನೆ 115 ಪ್ರಕರಣ, ಕೋರ್ಟ್‌ ದಂಡ ವಿಧಿಸಿದೆ.

ಏಕಮುಖ ಸಂಚಾರದಲ್ಲಿ ಚಾಲನೆ 3,41,700 ರೂ., ನಂಬರ್‌ ಪ್ಲೇಟ್‌ ಸಮಸ್ಯೆ 725 ಕೇಸ್‌ 3,56,900 ರೂ., ನಿಷೇಧಿತ ಸ್ಥಳದಲ್ಲಿ ನಿಲುಗಡೆ 261 ಪ್ರಕರಣ 1,51,400, ಸವಾರಿ ವೇಳೆ ಮೊಬೈಲ್‌ ಬಳಕೆ 49 ಪ್ರಕರಣ 69,800 ರೂ., ಟ್ರಾಫಿಕ್‌ ಸಿಗ್ನಲ್‌ ಉಲ್ಲಂಘನೆ 287ಕೇಸು 1,44,500ರೂ. ದಂಡ, ಕರ್ಕಶ ಹಾರ್ನ್‌ 4 ಕೇಸು 1600 ರೂ., ಹೈಬೀಮ್ಸ್ ಲೈಟ್‌ 31 ಕೇಸು 15500ದಂಡ, ನಿಷೇಧಿತ ಸ್ಥಳದಲ್ಲಿ ಹಾರ್ನ್‌ 5 ಕೇಸು 25000ದಂಡ, ಇತರ ನಿಯಮ ಉಲ್ಲಂಘನೆ ಪ್ರಕರಣ‌ 4950 ಕೇಸು 2,42,100ರೂ. ದಂಡ ವಿಧಿಸಲಾಗಿದೆ. ಈ ಮೂಲಕ ದ್ವಿಚಕ್ರ ವಾಹನ ಟ್ರಾಫಿಕ್‌ ನಿಯಮ ಉಲ್ಲಂಘನೆ ಆರೋಪದಲ್ಲಿ 15710 ಕೇಸು ದಾಖಲಾಗಿದ್ದು, 71,55,500ರೂ. ದಂಡ ಸಂಗ್ರಹವಾಗಿದೆ.

ಕಳೆದ 3 ದಿನಗಳಲ್ಲಿ ದಾಖಲಾದ ಪ್ರಕರಣ

ಕದ್ರಿ ಸಂಚಾರಿ ಠಾಣೆ : ಹೆಲ್ಮೆಟ್‌ ರಹಿತ ಚಾಲನೆ 84, ತ್ರಿಬಲ್‌ ಸವಾರಿ 14, ನಿರ್ಲಕ್ಷ್ಯದ ಚಾಲನೆ 6, ವಿರುದ್ಧ ದಿಕ್ಕಿನ ಚಾಲನೆ 11 ಸೇರಿದಂತೆ ಒಟ್ಟು 117 ಪ್ರಕರಣ ದಾಖಲಾಗಿದೆ.
ಪಶ್ಚಿಮ ಸಂಚಾರಿ ಪೊಲೀಸ್‌ ಠಾಣೆ : ಹೆಲ್ಮೆಟ್‌ ರಹಿತ ಚಾಲನೆ 103, ತ್ರಿಬಲ್‌ ಸವಾರಿ 4, ನಿರ್ಲಕ್ಷ್ಯದ ಚಾಲನೆ 11, ವಿರುದ್ಧ ದಿಕ್ಕಿನ ಚಾಲನೆ 112, ಒಟ್ಟು 230

ಉತ್ತರ ಸಂಚಾರಿ ಪೊಲೀಸ್‌ ಠಾಣೆ : ಹೆಲ್ಮೆಟ್‌ ರಹಿತ ಚಾಲನೆ 92, ತ್ರಿಬಲ್‌ ಸವಾರಿ 34, ನಿರ್ಲಕ್ಷ್ಯದ ಚಾಲನೆ 3, ವಿರುದ್ಧ ದಿಕ್ಕಿನ ಚಾಲನೆ 35 ಸೇರಿದಂತೆ ಒಟ್ಟು 138 ಪ್ರಕರಣ ದಾಖಲಾಗಿದೆ.
ಪಶ್ಚಿಮ ಸಂಚಾರಿ ಪೊಲೀಸ್‌ ಠಾಣೆ: ಹೆಲ್ಮೆಟ್‌ ರಹಿತ ಚಾಲನೆ 103, ತ್ರಿಬಲ್‌ ಸವಾರಿ 4, ನಿರ್ಲಕ್ಷ್ಯದ ಚಾಲನೆ 11, ವಿರುದ್ಧ ದಿಕ್ಕಿನ ಚಾಲನೆ 112, ಒಟ್ಟು 230 ಪ್ರಕರಣ ದಾಖಲಾಗಿದೆ.
ದಕ್ಷಿಣ ಸಂಚಾರಿ ಪೊಲೀಸ್‌ ಠಾಣೆ: ಹೆಲ್ಮೆಟ್‌ ರಹಿತ ಚಾಲನೆ 91, ತ್ರಿಬಲ್‌ ಸವಾರಿ 7, ನಿರ್ಲಕ್ಷ್ಯದ ಚಾಲನೆ 0, ವಿರುದ್ಧ ದಿಕ್ಕಿನ ಚಾಲನೆ 7, ಒಟ್ಟು 105 ಪ್ರಕರಣ ದಾಖಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.