ಬೆಂಗಳೂರು: ಚಂದ್ರು ಲಮಾಣಿ ಜತೆಗೆ ಇನ್ನೂ ಐದಾರು ಬಿಜೆಪಿ ಶಾಸಕರ ಟ್ರ್ಯಾಪ್ ಮಾಡಿಸುವ “ಸ್ಕೆಚ್” – ಬಿಜೆಪಿ ಪಕ್ಷದಲ್ಲಿ ಆತಂಕ!

ಬೆಂಗಳೂರು, ಮಾ. 14 : ಚಂದ್ರು ಲಮಾಣಿ ಜತೆಗೆ ಇನ್ನೂ ಐದಾರು ಬಿಜೆಪಿ ಶಾಸಕರ ಟ್ರ್ಯಾಪ್ ಸಾಧ್ಯತೆ ಬಗ್ಗೆ ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದು ಲಕ್ಷ್ಮಣ ರೇಖೆ” ದಾಟದಂತೆ ಪಕ್ಷದಿಂದ ಶಾಸಕರಿಗೆ ಎಚ್ಚರಿಕೆ ನೀಡಲಾಗಿದೆ.

ನುಂಗಲಾರದ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಾಗೂ ಬೈರತಿ ಬಸವರಾಜು ಪ್ರಕರಣ ಬಿಜೆಪಿಗೆ ಹಲವು ದೃಷ್ಟಿಯಿಂದ ನ ತುತ್ತಾಗಿ ಪರಿಣಮಿಸಿದೆ. ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ನಂತರ ಭ್ರಷ್ಟಾಚಾರ ಪ್ರಕರಣ ಸಂಬಂಧ ರಾಜ್ಯ ಸರಕಾರದ ವಿರುದ್ಧ ಧ್ವನಿ ಎತ್ತುವುದು ಬಿಜೆಪಿ ನಾಯಕರಿಗೆ ಗೆ ಸಂಕಷ್ಟ ತಂದೊಡ್ಡಿದೆ. ಇದರ ಬೆನ್ನಲ್ಲೇ ಮುಂದಿನ ಆರು ತಿಂಗಳೆ ಅವಧಿಯಲ್ಲಿ ಬಿಜೆಪಿಯ ಐದಾರು ಶಾಸಕರನ್ನು ಇದೇ ಮಾದರಿಯಲ್ಲಿ ಟ್ರ್ಯಾಪ್ ಮಾಡಿಸುವ “ಸ್ಕೆಚ್’ ರೆಡಿಯಾಗಿದೆ ಎಂಬ ಸುದ್ದಿ ವಿಪಕ್ಷ ಪಾಳಯವನ್ನು ಕಂಗೆಡಿಸಿದೆ.

ಈ ಹಿನ್ನೆಲೆಯಲ್ಲಿ ಕೆಲ ಶಾಸಕರಿಗೆ ಪಕ್ಷದಿಂದ ಎಚ್ಚರಿಕೆ ನೀಡಲಾಗಿದೆ. ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರಿಗೆ, ಆಪ್ತ ಸಹಾಯಕರಿಗೆ, ಕುಟುಂಬ ಸದಸ್ಯ ರಿಗೆ ದೂರವಾಣಿಯಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.