ಇರಾನ್ ಮೇಲಿನ ನಿರ್ಬಂಧ ಅಮೇರಿಕಾ ತೆರವು : ಮಾತುಕತೆಗೆ ಸಿದ್ಧ ಎಂದ ಟ್ರಂಪ್

Advertisement

ವಾಷಿಂಗ್ಟನ್‌ : ಟೆಹ್ರಾನ್ ವಿರುದ್ಧದ ಭಾರೀ ನಿರ್ಬಂಧಗಳನ್ನು ತೆಗೆದುಹಾಕುವಂತೆ ಅಮೇರಿಕಾವನ್ನು ಇರಾನ್ ದೇಶ ಕೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಈ ಬಗ್ಗೆ ನಾನು ಕೂಡಾ ಚರ್ಚೆ ನಡೆಸಲು ಸಿದ್ಧನಾಗಿದ್ದೇನೆಂದು” ಹೇಳಿಕೊಂಡಿದ್ದಾರೆ.

Advertisement

ಇರಾನ್‌ ಜೊತೆ ಮಾತುಕತೆಗೆ ಸಿದ್ದ ಎಂದ ಟ್ರಂಪ್

Advertisement

ನವೆಂಬರ್ 6ರಂದು ರಾತ್ರಿ ಮಧ್ಯ ಏಷ್ಯಾದ ನಾಯಕರೊಂದಿಗಿನ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್ ” ಇರಾನ್‌ ನಾಯಕರು ತನ್ನ ದೇಶದ ಮೇಲೆ ಅಮೆರಿಕ ಹೇರಿರುವ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಕೇಳಿಕೊಂಡಿದ್ದಾರೆ. ಅಮೆರಿಕ ಇರಾನ್ ನ ಮೇಲೆ ಅತ್ಯಂತ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದೆ, ಅದು ಇರಾನ್ ಗೆ ಎಷ್ಟು ಕಷ್ಟಕರವಾಗಿರಬಹುದು ಎಂದು ನನಗೆ ಗೊತ್ತು. ನಾನು ಈ ಬಗ್ಗೆ ಮಾತನಾಡಲು ಮುಕ್ತವಾಗಿದ್ದೇನೆ, ಹಾಗೂ ಈ ವಿಷಯದಲ್ಲಿ ಮುಂದೆ ಏನಾಗಲಿದೆ ಎಂದು ನೋಡೋಣ ಎನ್ನುವ ಮೂಲಕ ಇರಾನ್ ದೇಶಕ್ಕೆ ಪರೋಕ್ಷವಾಗಿ ಹೊಸ ಭರವಸೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಹಸ್ತಕ್ಷೇಪ ನಿಲ್ಲುವವರೆಗೂ ಸಹಕಾರ ಇಲ್ಲ ಎಂದ ಖಮೇನಿ

ಆದರೆ, ಸೋಮವಾರದಂದು ಅಮೇರಿಕಾಕ್ಕೆ ಬಹಳ ಕಟುವಾಗಿ ಸಂದೇಶ ನೀಡಿದ್ದ, ಇರಾನ್‌ ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ , ವಾಷಿಂಗ್ಟನ್ ಇಸ್ರೇಲ್‌ಗೆ ಬೆಂಬಲ ನೀಡುವುದನ್ನು, ಮಿಲಿಟರಿ ನೆಲೆಗಳನ್ನು ನಿರ್ವಹಿಸುವುದನ್ನು ಮತ್ತು ಮಧ್ಯಪ್ರಾಚ್ಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ಮುಂದುವರಿಸುವುದನ್ನು ನಿಲ್ಲಿಸುವವರೆಗೆ ಇರಾನ್ ಮತ್ತು ಅಮೆರಿಕ ನಡುವಿನ ಸಹಕಾರ ಸಾಧ್ಯವಿಲ್ಲ ಎಂದು ಹೇಳಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ