ಬಹುಮತದ ಸೀಟಿ ಊದಿದ ಟಿವಿಕೆ – ಸರ್ಕಾರ ರಚನೆಗೆ ದಳಪತಿ ವಿಜಯ್ ಸಿದ್ಧತೆ !

ಚೆನ್ನೈ, ಮೇ. 08 : ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯಾಬಲವನ್ನು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಗಳಿಸಿಕೊಂಡಿದೆ. ವಿಜಯ್‌ ಅವರನ್ನು ಬೆಂಬಲಿಸಲು ವಿಸಿಕೆ ಮತ್ತು ಎಡಪಕ್ಷಗಳು ಒಪ್ಪಿಕೊಂಡಿವೆ. ಈ ಮೂಲಕ ಕಳೆದ ನಾಲ್ಕು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿದ್ದ ಸರ್ಕಾರ ರಚನೆ ಹೈಡ್ರಾಮಾ ಅಂತ್ಯಗೊಂಡಿದೆ.

Advertisement

ಟಿವಿಕೆ ಪಕ್ಷಕ್ಕೆ ವಿಸಿಕೆ, ಸಿಪಿಐ ಮತ್ತು ಸಿಪಿಎಂ ಬೆಂಬಲ ಘೋಷಿಸುತ್ತಿದಂತ, ವಿಜಯ್‌ ಅವರು ತಮಿಳುನಾಡು ರಾಜ್ಯಪಾಲ ಆರ್‌ವಿ ಅರ್ಲೇಕರ್‌ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದಾರೆ. ಇಂದು (ಮೇ 8-ಶುಕ್ರವಾರ) ಸಂಜೆ 4-30ಕ್ಕೆ ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಲಿರುವ ವಿಜಯ್‌, ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಯಾರ ಸರ್ಕಾರ? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಂತಾಗಿದೆ.

ತಮಿಳನಾಡು ವಿಧಾನಸಭೆ ಚುನಾವಣೆಯಲ್ಲಿ 118 ಸ್ಥಾನಗಳಲ್ಲಿ ಜಯಗಳಿಸಿರುವ ಟಿವಿಕೆ ಪಕ್ಷಕ್ಕೆ, ಕಾಂಗ್ರೆಸ್‌ (5), ವಿಸಿಕೆ (2), ಸಿಪಿಐ (2) ಮತ್ತು ಸಿಪಿಎಂ (2) ಪಕ್ಷಗಳು ಬೆಂಬಲ ಘೋಷಿಸಿವೆ. ಹೀಗಾಗಿ ವಿಧಾನಸಭೆಯಲ್ಲಿ ವಿಜಯ್‌ ಸಂಖ್ಯಾಬಲ 119 ಆಗಿದೆ. ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯ್‌, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದ್ದು, ಟಿವಿಕೆ ಮೈತ್ರಿಕೂಟದ ಸಂಖ್ಯಾಬಲ 118 ಆಗಲಿದೆ. ಇದು ಸರಳ ಬಹುಮತದ ಸಂಖ್ಯಾಬಲವಾಗಿದೆ.

ಈ ಕುರಿತು ಮಾತನಾಡಿರುವ ಟಿವಿಕೆ ನಾಯಕ ಕಾಮರಾಜ್‌, “”ಪ್ರಸ್ತುತ, ಟಿವಿಕೆ ಪಕ್ಷವು ಪೂರ್ಣ ಬಹುಮತವನ್ನು ಗಳಿಸಿದೆ. ವಿಜಯ್ ಅವರು ಸಂಜೆ 4.30 ಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಸಿಪಿಐ, ಸಿಪಿಎಂ ಮತ್ತು ವಿಸಿಕೆ ಪಕ್ಷಗಳು ಸರ್ಕಾರ ರಚಿಸಲು ಮತ್ತು ವಿಜಯ್ ಅವರನ್ನು ತಮಿಳುನಾಡಿನ ಮುಖ್ಯಮಂತ್ರಿಯನ್ನಾಗಿ ಮಾಡಲು ಜನರ ಆದೇಶವನ್ನು ಒಪ್ಪಿಕೊಂಡಿರುವುದನ್ನು ನೋಡಿ ನಮಗೆ ತುಂಬಾ ಸಂತೋಷವಾಗಿದೆ” ಹೇಳಿದ್ದಾರೆ.

ತಮಿಳುನಾಡಿನಲ್ಲಿ ಸರ್ಕಾರ ರಚನೆಗಾಗಿ ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಟಿವಿಕೆ ವಿಜಯ್‌ ಅಂತಿಮ ಗೋಲು ಹೊಡೆದಿದ್ದು, ತಮಿಳನಾಡಿನ ಮುಂದಿನ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ರಾಜ್ಯಪಾಲ ಆರ್‌ವಿ ಅರ್ಲೇಕರ್‌ ಭೇಟಿ ಬಳಿಕವೇ, ವಿಜಯ್‌ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕ ಅಧಿಕೃತವಾಗಿ ಘೋಷಣೆಯಾಗಲಿದೆ.

ಕಳೆದ ಎರಡು ಭೇಟಿಗಳ ಸಂದರ್ಭದಲ್ಲಿ ತಮಿಳುನಾಡು ರಾಜ್ಯಪಾಲ ಆರ್‌ವಿ ಅರ್ಲೇಕರ್‌ ಅವರು ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲ ತೋರಿಸುವಂತೆ ವಿಜಯ್‌ ಅವರಿಗೆ ಸೂಚಿಸಿದ್ದರು. ಇದು ಒಂದು ರೀತಿಯಲ್ಲಿ ರಾಜ್ಯದಲ್ಲಿ ರಾಜ್ಯಪಾಲ vs ವಿಜಯ್‌ ಎಂಬ ಸನ್ನಿವೇಶವನ್ನು ಸೃಷ್ಟಿಸಿತ್ತು. ಆದರೆ ಈಗ ವಿಜಯ್‌ ಬಳಿ ಸಂಖ್ಯಾಬಲವಿದ್ದು, ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲಿದ್ದಾರೆ ಎಂಬ ಭರವಸೆ ಮೂಡಿದೆ.

ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆ ಕಸರತ್ತು ಯಶಸ್ವಿಯಾಗಿದ್ದು, ವಿಜಯ್‌ ಅವರ ರಾಜ್ಯಪಾಲರ ಭೇಟಿ ಬಳಿಕ ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನಾಂಕ ಮತ್ತು ಇತರ ಮಾಹಿತಿಗಳು ಹೊರಬೀಳಲಿವೆ. ಇನ್ನು ಬಲ್ಲ ಮೂಲಗಳ ಪ್ರಕಾರ ವಿಜಯ್‌ ಅವರ ಸಚಿವ ಸಂಪುಟದಲ್ಲಿ ವಿಸಿಕೆ ಪಕ್ಷಕ್ಕೆ ಒಂದು ಮತ್ತು ಎಡಪಕ್ಷಗಳಿಗೆ ಎರಡು ಸಚಿವ ಸ್ಥಾನಗಳು ಲಭಿಸಲಿವೆ. ಮಾತುಕತೆ ಸಂದರ್ಭದಲ್ಲಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

⚠️ Contents are protected on this website.