ಉಜಿರೆ, ಜು. 29 : ಉಜಿರೆ ಪೇಟೆಯಿಂದ ಬೆಳ್ತಂಗಡಿ ಬರುವ ರಸ್ತೆಯಲ್ಲಿ ಪೇಟೆ ಬಳಿಯ ಪೆಟ್ರೋಲ್ ಪಂಪ್ ಸಮೀಪ ಚರಂಡಿ ನೀರು ರಸ್ತೆಯಲ್ಲೇ ಹರಿದು, ವಾಹನ ಸವಾರರು ಪರದಾಡುವಂತಾಯಿತು. ರಸ್ತೆ ಬದಿಯ ಅಂಗಡಿಗಳಿಗೂ ನೀರು ನುಗ್ಗಿದ ದೃಶ್ಯ ಕಂಡು ಬಂದಿತ್ತು.

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಬಳಿ, ಚರಂಡಿ ಬ್ಲಾಕ್ ಆಗಿ ಚರಂಡಿಯ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಮಳೆ ನೀರಿನಿಂದಾವೃತವಾಗಿ ರಸ್ತೆ ಕಾಣದೆ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ, ರಸ್ತೆ ಬದಿಯ ಅಂಗಡಿಗಳಿಗೂ ನೀರು ನುಗ್ಗಿ ವರ್ತಕರು ಸಂಕಷ್ಟ ಎದುರಿಸುವಂತಾಯಿತು. ಚರಂಡಿ ನೀರು ರಸ್ತೆಯಲ್ಲೇ ಹರಿದು ಗಬ್ಬು ವಾಸನೆಯೂ ಪಸರಿಸಿತ್ತು.

ರಸ್ತೆಯಲ್ಲಿ ಹರಿದ ನೀರಿನ ಜೊತೆಗೆ ಪ್ಲಾಸ್ಟಿಕ್ ಬಾಟಲ್ ಗಳ ರಾಶಿಯೇ ಕಂಡುಬಂದಿದೆ. ಅಲ್ಲದೆ, ಕೊಳಕು ನೀರಿನಿಂದಾಗಿ ಗಬ್ಬು ವಾಸನೆ ಬೀರುತ್ತಿತ್ತು.

