ಮಂಗಳೂರು : “ಅಂಡರ್ ಆರ್ಮ್ ಕ್ರಿಕೆಟ್‌ನ ಅಂಬಾಸಿಡರ್” ಎಂದೇ ಖ್ಯಾತಿ ಗಳಿಸಿದ್ದ ತಿಲಕ್ ಗುರು ಇನ್ನಿಲ್ಲ

Advertisement

ಮಂಗಳೂರು, ಜು. 9 : ಅಂಡರ್ ಆರ್ಮ್ ಕ್ರಿಕೆಟ್‌ನ ಅಂಬಾಸಿಡರ್ ಎಂದೇ ಖ್ಯಾತಿ ಗಳಿಸಿದ್ದ ಮಿತ್ರ ಯಂಗ್ ಫ್ರೆಂಡ್ಸ್ ಉರ್ವ ತಂಡದ ಮಾಲೀಕರಾದ ತಿಲಕ್ ಗುರು ಕೊನೆಯುಸಿರೆಳೆದಿದ್ದಾರೆ.

Advertisement

ತಿಲಕ್ ಗುರು ಅವರು ನಿರಂತರವಾಗಿ ಉರ್ವ ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟಗಳ ಮೇಲ್ವಿಚಾರಕರಾಗಿ, ಪಂದ್ಯಾಟದ ಪೋಷಕರಾಗಿ, ಸ್ವ ತಂಡದ ನಾಯಕರಾಗಿ ಕಾರ್ಯಾಚರಿಸುತ್ತಿದ್ದರು. ಅಂಡರ್ ಆರ್ಮ್ ಕ್ರಿಕೆಟಿಗೆ ನೇರ ಪ್ರಸಾರದ ಆಲೋಚನೆಯನ್ನು ಕೊಟ್ಟು ಅಂಡರ್ ಕ್ರಿಕೆಟ್ ನ್ನು ಜನಪ್ರಿಯಗೊಳಿಸಿದ ಖ್ಯಾತಿ ಅವರದ್ದು. ಹೀಗಾಗಿ ಅವರು, ಅಂಡರ್ ಆರ್ಮ್ ಕ್ರಿಕೆಟ್ ನ ಅಂಬಾಸಿಡರ್ ಎಂದು ಗುರುತಿಸಿಕೊಂಡಿದ್ದರು.

Advertisement

ತಿಲಕ್ ಗುರು ಅವರು ಅಂಡರ್ ಆರ್ಮ್ ಆಟಗಾರರಿಗೆ ದಿನ ಭತ್ಯೆಯ ಆಧಾರದಲ್ಲಿ ಸಂಭಾವನೆ ನೀಡಲು ನೇತೃತ್ವ ನೀಡಿದ್ದರು. ಇನ್ನು ಕ್ರಿಕೆಟ್ ಹೊರತಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕ, ಆಯೋಜಕರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ತಿಲಕ್ ಅವರ ನಿಧನವು ಮಂಗಳೂರು ಅಂಡರ್ ಆರ್ಮ್ ಕ್ರಿಕೆಟ್ ಗೆ ತುಂಬಲಾರದ ನಷ್ಟವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ