ಉರುವಾಲುಪದವು : ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

ಉರುವಾಲು, ಮಾ. 04 : ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶುಭಾಶ್ರೀರ್ವಾದಗಳೊಂದಿಗೆ ಎಡಪದವು ಶ್ರೀ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಮಂಜುನಾಸ ಭಟ್ ಅಂತರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾ. 4ರಂದು ಚಾಲನೆ ದೊರೆಯಿತು.

Advertisement

ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಗಣಯಾಗ, ತೋರಣ ಮುಹೂರ್ತ, ನವಗ್ರಹ ಯಾಗ, ಅಶ್ಲೇಷ ಬಲಿ, ಭಜನೆ, ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಸೀತಾರಾಮ ನಾಯ್ಕ ಪಿ. ಏಣಿತಡ್ಕ ಉಗ್ರಾಣ ಉದ್ಘಾಟಿಸಿದರು. ಗುರುವಾಯನಕೆರೆ ಕಡಂಬು, ಸವಿನೆಲೆ ಲಕ್ಷ್ಮಣ ನಾಯ್ಕ ಕಾರ್ಯಾಲಯ ಉದ್ಘಾಟಿಸಿದರು. ತಾಲೂಕು ಮರಾಟಿ ಸಂಘ ಅಧ್ಯಕ್ಷ ಸತೀಶ್ ಹೆಚ್.ಎಲ್. ಗೋದಾಮು ಕಟ್ಟಡ ಉದ್ಘಾಟಿಸಿದರು. ಗುರುವಾಯನಕೆರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ ಭಜನಾ ಕಾರ್ಯಕ್ರಮ ಉದ್ಘಾಟಿಸಿದರು. ಪಲ್ಲಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿಷ್ಠಾ ಮಹೋತ್ಸವದ ಕಾರ್ಯಾಧ್ಯಕ್ಷ ಚೆನ್ನಕೇಶವ ಅರಸಮಜಲ್, ರಾಘವ ನಾಯ್ಕ ಶ್ರೀ ಜಲದುರ್ಗಾ, ಪ್ರಧಾನ ಕಾರ್ಯದರ್ಶಿ ಚಿದಾನಂದ ನಾಯ್ಕ ಕುಪೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಪ್ರದೀಪ ನಾಯ್ಕ ಆನಡ್ಕ ಹಾಗೂ ಕೃಷ್ಣಪ್ಪ ನಾಯ್ಕ, ಕೋಶಾಧಿಕಾರಿ ಪುಷ್ಪಾನಂದ ನಾಯ್ಕ ಗಜಂತೋಡಿ, ಉರುವಾಲು ಮಹಮ್ಮಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ವಿನೋದ್ ನಾಯ್ಕ ಶ್ರೀ ಜಲದುರ್ಗಾ, ಉಪಾಧ್ಯಕ್ಷ ಚಿದಾನಂದ ನಾಯ್ಕ ಮತ್ರಕುಮೇರು, ಕಾರ್ಯದರ್ಶಿ ಉಮೇಶ್ ನಾಯ್ಕ ಎಂಜಿರಪಲ್ಕೆ, ಉರುವಾಲು ಮಹಮ್ಮಾಯಿ ಮಾರಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಸೀತಾರಾಮ ನಾಯ್ಕ, ಕೋಶಾಧಿಕಾರಿ ಹರೀಶ್ ನಾಯ್ಕ್ ಕುಪ್ಪೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಹೆಚ್.ಎಲ್, ಉಪಾಧ್ಯಕ್ಷ ಶೇಖರ್ ನಾಯ್ಕ ಹಲೇಜಿ, ಕಾರ್ಯದರ್ಶಿ ಕಿಶನ್ ನಾಯ್ಕ ಮಜ್ಜೆ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಆನಡ್ಕ ಸಹಿತ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.